ಮಸ್ಕಿಯಲ್ಲಿ ಹಿಂದೂ ಸಮಾವೇಶದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ವೆಂಕಟಗಿರಿ ಕ್ಯಾಂಪಿನ ಸದಾನಂದ ಶರಣರು, ಸಂತೆಕೆಲ್ಲೂರಿನ ಮಹಾಂತ ಶಿವಾಚಾರ್ಯರು, ಸಂಸ್ಕಾರ ಭಾರತಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ, ಬಸವರಾಜ ಹವಾಲ್ದಾರ್ ಪುಷ್ಪ ಅರ್ಪಿಸಿದರು. 
ರಾಯಚೂರು

ಭಾರತದಲ್ಲಿ ಕ್ಷಾತ್ರಾ-ಜ್ಞಾನ ಅಪಾರ

ಪ್ರವೀಣ ಉದುಸಾ ದಲಬಂಜನ್
ಮಸ್ಕಿ: ಐದು ಸಾವಿರ ವರ್ಷಗಳ ಹಿಂದಿನಿಂದಲೂ ಭಾರತದ ಹಿಂದೂ ಧರ್ಮ ತನ್ನ ಗತವೈಭವವನ್ನು ಜಗತ್ತಿಗೆ ಸಾರಿದೆ ಎಂದು ಸಂಸ್ಕಾರ ಭಾರತಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಹೇಳಿದರು.
ಪಟ್ಟಣದ ತೇರಿನ ಮನೆ ಹತ್ತಿರ ಬುಧವಾರ ಹಿಂದೂ ಸಮಾಜ್ಯೋತ್ಸವ ಹಾಗೂ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದೇಶಿ ಸಂಸ್ಕೃತಿಗಳು ನಾಶವಾಗುತ್ತಿದ್ದರೂ ಭಾರತದ ಹಿಂದೂ ಸಂಸ್ಕೃತಿ ಪುನಃರುತ್ಥಾನಗೊಳುತ್ತಿದೆ ಎಂದರು.
ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರ ಆಕ್ರಮಣದಿಂದ ಅನೇಕ ದೇಶಗಳು ಮಾತಾಂತರಗೊಂಡಿವೆ. ಆದರೆ ಭಾರತದಲ್ಲಿ ಅನೇಕ ಆಕ್ರಮಣಗಳು ನಡೆದರು ಮತಾಂತರ ಮಾಡಲು ಸಾಧ್ಯವಾಗಿಲ್ಲ. ದೇಶದ ಸಂಸ್ಕೃತಿ ಉಳಿವಿಗಾಗಿ ಅನೇಕರ ಬಲಿದಾನವಾಗಿದೆ. ಭಾರತದಲ್ಲಿ ಕ್ಷಾತ್ರಾ ಮತ್ತು ಜ್ಞಾನ ಅಪಾರವಾಗಿದೆ. ಅದನ್ನು ತಿಳಿಸುವ ಕೆಲಸ ಸಂಘ ಮಾಡುತ್ತಿದೆ ಎಂದರು.
ರಾಷ್ಟ್ರೀಯ ಸ್ವಯಂ ಸಂಘ ಅಸ್ಥಿತ್ವಗೊಂಡು ಶತಮಾನ ಕಂಡಿದೆ. ಈ ನೂರು ವರ್ಷದಲ್ಲಿ ಅನೇಕ ಬದಲಾವಣೆಗೆ ಸಂಘದ ಚಟುವಟಿಕೆ ಕಾರಣವಾಗಿದ್ದು ಹಿಂದೂಗಳು ಜಾತಿ ಜಾತಿಗಳ ಮಧ್ಯೆ ಚದುರಿ ಹೋಗದೆ ನಾವೆಲ್ಲ ಒಂದೂ ಎಂಬ ಭಾವನೆಯನ್ನು ಬಿತ್ತುವ ಮೂಲಕ ಜಾಗೃತಿ ಮೂಡಿಸುವುದಕ್ಕಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ದೇಶಭಕ್ತಿ ಗೀತೆಗಳಿಗೆ ಸಂಸ್ಕೃತಿ ನೃತ್ಯ, ಶಾಲೆಯ ಮಕ್ಕಳು ಭರತನಾಟ್ಯ ಪ್ರದರ್ಶನ ನೀಡಿದರು. ಮಹಿಳೆಯರು ಲಲಿತ ಸಹಸ್ರನಾಮ, ಭಕ್ತಿ ಗೀತೆಗಳನ್ನು ಹಾಡಿದರು. ವೆಂಕಟಗಿರಿ ಕ್ಯಾಂಪಿನ ಸದಾನಂದ ಶರಣರು, ಸಂತೆಕೆಲ್ಲೂರಿನ ಮಹಾಂತ ಶಿವಾಚಾರ್ಯರು ಆಶೀವರ್ಚನ ನೀಡಿದರು. ಬಸವರಾಜ ಹವಾಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಹೂವಿನಬಾವಿ ನಿರ್ವಹಿಸಿದರು.
-29-ಎಂಎಸ್‌ಕೆ-1