ದೇವದುರ್ಗದ ಕರ್ನಾಟಕ ಪದವಿ ಕಾಲೇಜಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಮಾನಸಯ್ಯ ದೊರೆ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಆಜೀವ ಸದಸ್ಯ ಆಕಾಶ್, ತಾಯಮ್ಮ, ಮಲ್ಲಿಕಾರ್ಜುನ ಇತರರಿದ್ದರು.
- ಉಪನ್ಯಾಸಕಿ ಡಾ.ತಾಯಮ್ಮ ಅಭಿಮತ
- ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಆಚರಣೆ
ದೇವದುರ್ಗ: ಕನ್ನಡ ನಾಡಿಗೆ ಮೈಸೂರು ಒಡೆಯರು ನೀಡಿದ ಕೊಡುಗೆ ಅವಿಸ್ಮರಣೀಯ. ಸ್ವಾತಂತ್ರ್ಯ ಪೂರ್ವದಲ್ಲೂ ರಾಜ್ಯದಲ್ಲಿ ಮಾದರಿ ಆಡಳಿತ ನಡೆಸಿದ್ದಾರೆ ಎಂದು ಉಪನ್ಯಾಸಕಿ ತಾಯಮ್ಮ ಹೇಳಿದರು.
ಪಟ್ಟಣದ ಕರ್ನಾಟಕ ಪದವಿ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರು 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿ ಸಾಹಿತ್ಯಕ್ಕೆ ಪ್ರೇರಣೆ ನೀಡಿದರು. ಚಿಕ್ಕ ವಯಸ್ಸಿನಲ್ಲಿ ಕೌಶಲಗಳನ್ನು ಕಲಿತುಕೊಂಡಿದ್ದರು. ದೇಶದಲ್ಲಿ ಟಿಬಿ ರೋಗ ನಿರ್ಮೂಲನೆಗೆ 90 ಎಕರೆ ಸ್ವಂತ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಿದ್ದು, ರೋಗಿಗಳಿಗೆ ಇಂದಿಗೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಸಂಸ್ಥೆ ಸಂಸ್ಥಾಪಕ ಅಮರೇಶ್ ಗೋಪಾಲಪುರ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರು ಶಿವನಸಮುದ್ರ ಜಲ ವಿದ್ಯುತ್ ಕೇಂದ್ರ, ಕೃಷ್ಣರಾಜಸಾಗರ ಅಣೆಕಟ್ಟೆ, ಮೈಸೂರು ನಗರ ಅಭಿವೃದ್ಧಿ ಸಂಸ್ಥೆ, ಮೈಸೂರು ವಿವಿ, ಮೈಸೂರು ಬ್ಯಾಂಕ್, ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಶ್ರೀಗಂಧದ ಎಣ್ಣೆ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್ ಕೈಗಾರಿಕೆಗಳನ್ನು ಸ್ಥಾಪಿಸಿ ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಪ್ರಾಚಾರ್ಯ ಮಾನಸಯ್ಯ ದೊರೆ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಆಜೀವ ಸದಸ್ಯ ಆಕಾಶ್, ಉಪನ್ಯಾಸಕರಾದ ಮಲ್ಲಿಕಾರ್ಜುನ, ನಲ್ಲಾರೆಡ್ಡಿ ಗಬ್ಬೂರು, ನಿಂಗಯ್ಯ, ಹನುಮಂತರಾಯ ಇತರರಿದ್ದರು.