ಮಾನ್ವಿಯಲ್ಲಿ ಉಪ ತಹಸೀಲ್ದಾರ್ ವಿನಾಯಕರಾವ್‌ಗೆ ಬಿಎಸ್‌ಪಿ ತಾಲೂಕು ಘಟಕ ಮನವಿ ಸಲ್ಲಿಸಿತು. ರಾಜ್ಯ ಕಾರ್ಯದರ್ಶಿ ಶ್ಯಾಮಸುಂದರ ಕುಂಬದಾಳ, ಪ್ರಮುಖರಾದ ಚಂದ್ರಶೇಖರ್ ಬಿ.ಚನ್ನಬಸವ ಜಗಲಿ, ವಿರುಪನಗೌಡ ಜಟ್ಟಿ ಇತರರಿದ್ದರು. 
ರಾಯಚೂರು

ಕಕ ಅನುದಾನ ಸಮರ್ಪಕ ಬಳಕೆಯಾಗಲಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಕೆ
  • ಮಾನ್ವಿ ಬಿಎಸ್‌ಪಿ ಪದಾಧಿಕಾರಿಗಳು ಆಗ್ರಹ
ಮಾನ್ವಿ: ಕೆಕೆಆರ್‌ಡಿಬಿ ಅನುದಾನ ಸಮರ್ಪಕ ಬಳಕೆಗೆ ಆಗ್ರಹಿಸಿ ಬಿಎಸ್‌ಪಿ ಪದಾಧಿಕಾರಿಗಳು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಪಟ್ಟಣದ ತಹಸಿಲ್ ಕಚೇರಿಯಲ್ಲಿ ಉಪತಹಸೀಲ್ದಾರ್ ವಿನಾಯಕರಾವ್‌ಗೆ ಸಲ್ಲಿಸಿದರು.
ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಶ್ಯಾಮಸುಂದರ ಕುಂಬದಾಳ ಮಾತನಾಡಿ, ರಾಜ್ಯ ಸರ್ಕಾರ ಕಕ ಭಾಗಕ್ಕೆ ಶೈಕ್ಷಣಿಕ, ಸಾರಿಗೆ, ಆರೋಗ್ಯ, ಮೂಲಸೌಕರ್ಯಗಳಿಗಾಗಿ 2025-2026ನೇ ಸಾಲಿನ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ಅನುದಾನ ನೀಡಿದೆ. ಆದರೆ, ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷೃದಿಂದ ಅನುದಾನ ಮರಳುತ್ತಿದೆ. ಇದಕ್ಕೆ ಪ್ರತ್ಯೇಕ ಇಜಿನಿಯರಿಂಗ್ ವಿಭಾಗ ಪ್ರಾರಂಭಿಸದೆ ಇರುವುದು ಕಾರಣವಾಗಿದೆ ಎಂದು ದೂರಿದರು.
ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ. 371(ಜೆ )ಜಾರಿಯಾಗಿದ್ದರೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಇನ್ನು ಹೆಚ್ಚಿನ ಪ್ರಾತಿನಿಧ್ಯ ನೀಡದೆ, ಈ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡದೆ ನಿರ್ಲಕ್ಷಿಸಲಾಗಿದೆ. ಕಕ ಅನುದಾನದಲ್ಲಿ 4,137ಕೋಟಿ ರೂ. ಬಳಸಿಲ್ಲ ಎನ್ನಲಾಗಿದೆ. ಕೂಡಲೇ ಅನುದಾನದ ಸಂಪೂರ್ಣ ಬಳಕೆ ಮಾಡಿಕೊಂಡು ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.