ಕನ್ನಡ ಸಾಹಿತ್ಯ ಪರಿಷತ್ ಬೈಲ ತಿದ್ದುಪಡಿ ಮಾಡಿ ರಾಜ್ಯಾಧ್ಯಕರ ಹಾಗೂ ಜಿಲ್ಲಾಧ್ಯಕ್ಷ ಅವಧಿಯನ್ನು ಐದು ವರ್ಷದ ಬದಲು ಮೂರು ವರ್ಷಗಳಿಗೆ ನಿಗಧಿಗೊಳಿಸಬೇಕೆಂದು ಬೆಳಕು ಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ನ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018 ರಲ್ಲಿ ಉಡುಪಿ ಜಿಲ್ಲೆಯ ಕೋಟಾ ಗ್ರಾಮದಲ್ಲಿ ನಡೆದ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಅಧಿಕಾರ ಅವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ವಿಸ್ತರಿಸಲು ನಿರ್ಣಯಿಸಲಾಗಿದೆ. ಆದರೆ ಐದು ವರ್ಷದ ಅವಧಿ ನಿಗಧಿಗೊಳಸಿರುವದರಿಂದ ಪರಿಷತ್ ಚಟುವಟಿಕೆಗಳು ನಡೆಸಲು ಸಾಧ್ಯವಾಗದೇ ಹೋಗಿದೆ.
ಹೊಸಬರಿಗೂ ಅವಕಾಶ ನೀಡಬೇಕಿರುವದರಿಂದ ಐದು ವರ್ಷದ ಬದಲು ಮೂರು ವರ್ಷಕ್ಕೆ ನಿಗಧಿಪಡಿಸಬೇಕಿದೆ. ಹೊಸಚಿಂತನೆ, ನಾಯಕತ್ವದ ಬದಲಾವಣೆಗೆ ಅಧಿಕಾರ ಅವಧಿಯ ಬದಲಾವಣೆ ಮಾಡಬೇಕಿದೆ. ಪರಿಷತ್ ಆಡಳಿತಾಧಿಕಾರಿಗಳು ಬೈಲಾ ತಿದ್ದುಪಡಿ ತರುವ ಮೂಲಕ ಅವಕಾಶ ನೀಡಬೇಕೆಂದರು.
ಈ ಸಂದರ್ಭದಲ್ಲಿ ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ ಇದ್ದರು.