ಮಸ್ಕಿಯ ಕಾಳಿಕಾದೇವಿ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ ನಿಮಿತ್ತ ದೇವಿಗೆ ವೀಳ್ಯದೆಲೆಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
- ಕಾಳಿಕಾ ದೇವಿಗೆ ವೀಳ್ಯದೆಲೆಗಳಿಂದ ವಿಶೇಷ ಅಲಂಕಾರ
- ವೀರಭದ್ರ ದೇವಸ್ಥಾನದಲ್ಲಿ ದೇವರಿಗೆ ಪೂಜೆ
ಮಸ್ಕಿ: ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಮಂಗಳವಾರ ಕಾರ್ತಿಕ ದೀಪೋತ್ಸವ ಆಚರಿಸಲಾಯಿತು.
ಬೆಳಗ್ಗೆ ಕಾಳಿಕಾ ದೇವಿಗೆ ವೀಳ್ಯದೆಲೆಗಳಿಂದ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಯಿತು. ಸಂಜೆ ಮಹಿಳೆಯರು ಕುಟುಂಬ ಸಮೇತ ಬಂದು ಹಣತೆಗಳನ್ನು ಹಚ್ಚಿ ದೀಪೋತ್ಸವ ಆಚರಿಸಿದರು.
ಅದೇ ರೀತಿ ವೀರಭದ್ರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿತು. ಸಂಜೆ ಗ್ರಾಮಸ್ಥರು ದೀಪಗಳನ್ನು ಹಚ್ಚಿ ಸಂಭ್ರಮಿಸಿದರು. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲದೆ ಶ್ರೀಮಲ್ಲಿಕಾರ್ಜುನ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ, ಜಡೆ ಶಂಕರಲಿಂಗ ದೇವಸ್ಥಾನ, ಕ್ಯಾತ್ನಟ್ಟಿ ವೀರಭಧ್ರೇಶ್ವರ ದೇವಸ್ಥಾನ, ಮುದಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಜರುಗಿತು .