ಗಬ್ಬೂರಿನಲ್ಲಿ ಶ್ರೀ ಬೂದಿಬಸವೇಶ್ವರ ಜಾತ್ರೆ ಸಮಾರೋಪ ಸಮಾರಂಭವನ್ನು ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕ್ರಪ್ಪ ಸಾಹು ಉದ್ಘಾಟಿಸಿದರು. ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರು, ನವಲಕಲ್ ಅಭಿನವ ಸೋಮನಾಥ ಶಿವಾಚಾರ್ಯರು, ಶಂಭುಸೋಮನಾಥ ಶಿವಾಚಾರ್ಯರು, ಶಿವಮೂರ್ತಿ ಸ್ವಾಮೀಜಿ ಇತರರಿದ್ದರು. 
ರಾಯಚೂರು

ಗಬ್ಬೂರು ಶ್ರೀಮಠ ಭಕ್ತರ ಪಾಲಿನ ಕಾಮಧೇನು

ಪ್ರಮುಖ ಮುಖ್ಯಾಂಶಗಳು

  • ಸಾಮೂಹಿಕ
  • ವಿವಾಹ
  • ಕಾರ್ಯಕ್ರಮ
ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕ್ರಪ್ಪ ಸಾಹು ಬಣ್ಣನೆ ಬೂದಿಬಸವೇಶ್ವರ ಜಾತ್ರೋತ್ಸವ ಸಂಪನ್ನ
ದೇವದುರ್ಗ: ಸರ್ಕಾರಗಳು ಮಾಡದಂಥ ಕಾರ್ಯಗಳನ್ನು ಮಠಮಾನ್ಯಗಳು ಮಾಡುತ್ತಿವೆ ಎಂದು ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕ್ರಪ್ಪ ಸಾಹು ಹೇಳಿದರು.
ತಾಲೂಕಿನ ಗಬ್ಬೂರು ಶ್ರೀಬೂದಿಬಸವೇಶ್ವರ ಸಂಸ್ಥಾನಮಠದಲ್ಲಿ ಆಯೋಜಿಸಿದ್ದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಧರ್ಮಸಭೆ ಉದ್ಘಾಟಿಸಿ ಭಾನುವಾರ ಮಾತನಾಡಿದರು. ನಾನು ಶ್ರೀಮಠದ ಶಿಕ್ಷಣ ಸಂಸ್ಥೆಯಲ್ಲಿ ಓದಿ ಬೆಳೆದಿದ್ದೇನೆ. ನನಗೆ ಉತ್ತಮ ಸಂಸ್ಕಾರ ನೀಡುವ ಜತೆಗೆ ಸಮಾಜದಲ್ಲಿ ಉನ್ನತಹುದ್ದೆ ಅಲಂಕರಿಸಲು ಆಶೀರ್ವದಿಸಿದೆ. ಶ್ರೀಮಠ ಈ ಭಾಗದ ಭೂಮಿ ಮೇಲಿನ ಕೈಲಾಸವಾಗಿದ್ದು ಭಕ್ತರ ಪಾಲಿನ ಕಾಮಧೇನು ಕಲ್ಪವೃಕ್ಷವಾಗಿದೆ ಎಂದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಮಾತನಾಡಿ, ಗಬ್ಬೂರು ಸಂಸ್ಥಾನಮಠ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿ ಬಡವರ ಮನೆ ಬೆಳಗುವ ಜತೆಗೆ ಸಾಲಬಾಧೆ, ದುಂದುವೆಚ್ಚಕ್ಕೆ ಕಡಿವಾಣ ಹಾಕಿದೆ. ಅಧ್ಯಾತ್ಮ, ಬಡವರ ಮಕ್ಕಳಿಗೆ ಶಿಕ್ಷಣ, ವಸತಿ, ಸಂಸ್ಕೃತಿ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಿದ್ದು, ಮಾದರಿ ಕಾರ್ಯವಾಗಿದೆ ಎಂದು ತಿಳಿಸಿದರು.
ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ದೇವರಭೂಪುರದ ಗಜದಂಡ ಶಿವಾಚಾರ್ಯರು, ಚನ್ನಬಸವ ಶಿವಾಚಾರ್ಯರು, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಅರಕೇರಾ ತಹಸೀಲ್ದಾರ್ ಅಮರೇಶ ಬಿರಾದಾರ್, ಚನ್ನನಗೌಡ ಪೊಲೀಸ್ ಪಾಟೀಲ್ ಇತರರಿದ್ದರು.