ಮಸ್ಕಿಯಲ್ಲಿ ಶ್ರೀ ಕಲ್ಗುಡಿ ಚೌಡೇಶ್ವರಿ ದೇವಿ ರಥೋತ್ಸವ ಶನಿವಾರ ಅದ್ದೂರಿಯಾಗಿ ಜರುಗಿತು.
ಮಸ್ಕಿ: ಪಟ್ಟಣದ ಹಳೇ ಪೊಲೀಸ್ ಠಾಣೆ ಬಳಿ ಇರುವ ಶ್ರೀ ಕಲ್ಗುಡಿ ಚೌಡೇಶ್ವರಿ ದೇವಿ ದೇವಸ್ಥಾನದ ಜಾತ್ರೋತ್ಸವ ಶನಿವಾರ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ದೇವಿಗೆ ಪೂರ್ಣ ಕುಂಭದೊಂದಿಗೆ ವಿಶೇಷ ಪೂಜೆ ನೆರವೇರಿತು. ಸಂಜೆ 6 ಗಂಟೆಗೆ ಪಲ್ಲಕ್ಕಿಯಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ರಥದ ಸುತ್ತ ಪ್ರದಕ್ಷ್ಷಿಣೆ ಹಾಕಿ ನಂತರ ಬಸವೇಶ್ವರ ಕಟ್ಟೆವರೆಗೆ ಮೆರವಣಿಗೆ ಸಾಗಿತು. ನಂತರ ಚೌಡೇಶ್ವರಿ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರ ಜಯಘೋಷಣೆಗಳ ಮಧ್ಯೆರಥವನ್ನು ಎಳೆಯಲಾಯಿತು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಜಿಪಂ ಮಾಜಿ ಸದಸ್ಯರಾದ ಕೆ.ವೀರನಗೌಡ, ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಶಾಸಕ ಆರ್.ಬಸನಗೌಡ ತುರ್ವಿಹಾಳ ಪುತ್ರ ಸತೀಶಗೌಡ, ಬಸನಗೌಡ ಪೊಲೀಸ್ ಪಾಟೀಲ, ಅಂದಾನಪ್ಪ ಗುಂಡಳ್ಳಿ, ಮಲ್ಲಪ್ಪ ಕುಡತಿನಿ, ಶಿವಶಂಕ್ರಪ್ಪ ಹಳ್ಳಿ, ಶಂಕ್ರಪ್ಪ ಜೋಗಿನ್, ಪಂಪಣ್ಣ ಗುಂಡಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.