ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಶಾಮುಕ್ತ ಭಾರತ ಅಭಿಯಾನ ನಡೆಯಿತು. ಪ್ರಮುಖರಾದ ರಾಜು ತೇರದಾಳ, ಗದಿಗೆಪ್ಪ ವದಗನಹಾಳ, ಮುಖ್ಯಶಿಕ್ಷಕ ಪರಶುರಾಮ ಸಾಲ್ಮನಿ, ಶಿಕ್ಷಕರಾದ ಗಿರಿಯಪ್ಪ, ರಾಜಾಸಾಬ್, ಮರ್ದಾನಲಿ, ಸುನೀತಾ ಇತರರಿದ್ದರು. 
ರಾಯಚೂರು

ನಶಾಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ

ಅಳವಂಡಿ: ದುಶ್ಚಟಗಳಿಗೆ ಯುವಕರು ಬಲಿಯಾಗುವುದರಿಂದ ಅಮೂಲ್ಯ ಜೀವನ ಹಾಳಾಗಲಿದ್ದು, ಅವರ ಭವಿಷ್ಯವೂ ಮಂಕಾಗುತ್ತಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಪ್ರಚಾರಕ ರಾಜು ತೇರದಾಳ ಹೇಳಿದರು.

ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಮಾದಕ ವ್ಯಸನ ಹಾಗೂ ಇತರ ದುಶ್ಚಟಗಳು ಆರೋಗ್ಯ ಹಾಳು ಮಾಡುವುದರ ಜತೆಗೆ ಕುಟುಂಬದ ಆರ್ಥಿಕ ಸ್ಥಿತಿ, ಸಾಮಾಜಿಕ ಸಂಬಂಧಗಳು ಹಾಗೂ ದೇಶದ ಅಭಿವೃದ್ಧಿ ಮೇಲೂ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಮಾದಕ ವ್ಯಸನಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು. 
ಧ್ಯಾನ, ಯೋಗ ಮತ್ತು ಪ್ರಾಣಾಯಾಮದಂತಹ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡರೆ ಮಾನಸಿಕ ನೆಮ್ಮದಿ, ದೈಹಿಕ ಸದೃಢತೆ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ನಶಾಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. 
ಮುಖ್ಯಶಿಕ್ಷಕ ಪರಶುರಾಮ ಸಾಲ್ಮನಿ ಮಾತನಾಡಿ, ನಿರಂತರ ಅಧ್ಯಯನ, ವ್ಯಾಯಾಮ, ಸಮಯಪಾಲನೆ ಹಾಗೂ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ, ರಾಜಾಸಾಬ್ ಬಳಿಗಾರ, ಮರ್ದಾನಲಿ ಗಡಾದ, ಪ್ರಕಾಶರೆಡ್ಡಿ, ಗೋವಿಂದರೆಡ್ಡಿ, ವೀರಯ್ಯ ಪೂಜಾರ, ನಾರಾಯಣಪ್ಪ ಬಿಸನಳ್ಳಿ, ಶಾಂತವೀರಯ್ಯ ಕಳ್ಳಿಮಠ, ಸುನೀತಾ ಯಾಳಗಿ, ಸೋಮಣ್ಣ ತಳಕಲ್ ಇತರರಿದ್ದರು.