ಗುರುಗುಂಟಾದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೇವರಭೂಪೂರ ಬೃಹನ್ಮಠದ ಅಭಿನವ ಗಜದಂಡ ಶ್ರೀಗಳು ಮಾತನಾಡಿದರು. ಪ್ರಮುಖರಾದ ರಾಜಾ ಸೋಮನಾಥ ನಾಯಕ, ವೆಂಕಟೇಶ್ ಗುತ್ತೇದಾರ್, ಚನ್ನಯ್ಯಸ್ವಾಮಿ ಇತರರಿದ್ದರು. 
ರಾಯಚೂರು

ಶ್ರೀಮಠದ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿ

ಗುರುಗುಂಟಾ: ಗುರುಗುಂಟಾ ಗ್ರಾಮ ನಮ್ಮ ಶ್ರೀಮಠಕ್ಕೆ ಬಲಭುಜವಿದ್ದಂತೆ ಎಂದು ದೇವರಭೂಪುರ ಬೃಹನ್ಮಠದ ಅಭಿನವ ಗಜದಂಡ ಶ್ರೀಗಳು ಹೇಳಿದರು.
ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ದೇವರಭೂಪೂರಿನ ಬೃಹನ್ಮಠದಲ್ಲಿ 21ನೇ ಪಟ್ಟಾಧಿಕಾರ ಮಹೋತ್ಸವದ ಆಹ್ವಾನ ಪತ್ರಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಲೋಕಕಲ್ಯಾಣಾರ್ಥವಾಗಿ ಶ್ರೀಮಠದಲ್ಲಿ ಹಮ್ಮಿಕೊಂಡಿರುವ 21 ದಿನಗಳ ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸುವುದರ ಜತೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು. 
ಅಧ್ಯಕ್ಷತೆ ವಹಿಸಿದ್ದ ಸಂಸ್ಥಾನಿಕ ರಾಜಾ ಸೋಮನಾಥ ನಾಯಕ ಮಾತನಾಡಿ, ಸಂಸ್ಥಾನ ವ್ಯಾಪ್ತಿಯ ಸರ್ವರೂ ಟೊಂಕಕಟ್ಟಿ ನಿಂತು ಶ್ರೀಮಠದ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. 
ಕೈಲಾಸ ಲಿಂಗ ಶ್ರೀಗಳು, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಲಿಂಗಸುಗೂರು ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೇದಾರ್, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಚನ್ನಯ್ಯ ಸ್ವಾಮಿ ಹೊರಪೇಟಮಠ, ಮಾಜಿ ಅಧ್ಯಕ್ಷ ವಿಶ್ವನಾಥ ಪಟ್ಟಣಶೆಟ್ಟಿ, ಗುಂಡಣ್ಣ ಅರಳಿ, ವಿದ್ವಾನ್ ಗಂಗಾಧರಯ್ಯ ಶಾಸ್ತ್ರೀ, ಪ್ರಮುಖರಾದ ಗುಂಡಯ್ಯಸ್ವಾಮಿ ಕಳಸದ ಗುಡಿ, ವಕೀಲ ಶರಣಬಸವ ಪಟ್ಟಣಶೆಟ್ಟಿ ಇತರರಿದ್ದರು. ಇದಕ್ಕೂ ಉಟಕನೂರು ತಾತ ಗದ್ದುಗೆಯಿಂದ ಸಕಲ ವಾದ್ಯ ಮೇಳಗಳೊಂದಿಗೆ ಶ್ರೀಗಳನ್ನು ಮೆರವಣಿಗೆ ಮೂಲಕ ಕಲ್ಯಾಣ ಮಂಟಪಕ್ಕೆ ತರಲಾಯಿತು.