ಮಲದಕಲ್ ಗ್ರಾಮದಲ್ಲಿ ಕ್ಷಯಮುಕ್ತ ಭಾರತ ನಿರ್ಮಾಣದ ಬಗ್ಗೆ ಕ್ಷಯ ರೋಗ ನಿರ್ಮೂಲನಾ ಘಟಕದಿಂದ ಜಾಗೃತಿ ಮೂಡಿಸಲಾಯಿತು. ತಾಲೂಕು ಮೇಲ್ವಿಚಾರಕರಾದ ಮಹೇಶ ನಾಯಕ, ರವಿಶಂಕರ ಶುಕ್ಲಾ, ಭೀಮೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಈರಣ್ಣ, ಸಮುದಾಯ ಆರೋಗ್ಯ ಅಧಿಕಾರಿ ಜಾಫರ್ ಇದ್ದರು.
- ಮೇಲ್ವಿಚಾರಕ ಮಹೇಶ ನಾಯಕ ಮನವಿ
- ಅರಕೇರಾ ಟಿಬಿ ಅಭಿಯಾನ ಆರೋಗ್ಯ ಶಿಬಿರ
ಅರಕೇರಾ: ಕ್ಷಯಮುಕ್ತ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ತಾಲೂಕು ಕ್ಷಯರೋಗ ಮೇಲ್ವಿಚಾರಕ ಮಹೇಶ ನಾಯಕ ಹೇಳಿದರು.
ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಲದಕಲ್ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಕ್ಷಯರೋಗ ನಿರ್ಮೂಲನಾ ಘಟಕದಿಂದ ಹಮ್ಮಿಕೊಂಡಿದ್ದ 100 ದಿನದ ಟಿಬಿ ಅಭಿಯಾನದ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು. ಕ್ಷಯರೋಗ ಲಕ್ಷಣಗಳ ಬಗ್ಗೆ, ಉಚಿತ ತಪಾಸಣೆ, ಚಿಕಿತ್ಸೆ , ನಿಕ್ಷಯ ಪೋಷಣ ಯೋಜನೆಯಡಿ ಪ್ರತಿ ತಿಂಗಳು 1000 ರೂ. ಪೌಷ್ಟಿಕ ಆಹಾರ ಸೇವನೆಗೆ ಪ್ರೋತ್ಸಾಹ ಧನ, ನಿಕ್ಷಯ ಮಿತ್ರದಿಂದ ಪೌಷ್ಟಿಕ ಆಹಾರ ವಿತರಣೆ ಬಗ್ಗೆ ತಿಳಿಸಿದರು.
ಶಿಬಿರದಲ್ಲಿ 60ವರ್ಷ ಮೇಲ್ಪಟ್ಟವರು, ಮಧುಮೇಹಿಗಳು, ಧೂಮಪಾನಿಗಳು, ಕಾರ್ಮಿಕರು, ಅತಿ ಕಡಿಮೆ ತೂಕದ ಯುವಕ, ಯುವತಿಯರು, ಕ್ಷಯರೋಗಿಗಳ ಸಂಪರ್ಕ ಹೊಂದಿದ ಜನರನ್ನು ಟಿಬಿ ತಪಾಸಣೆಗೆ ಒಳಪಡಿಸಲಾಯಿತು. ಟಿಬಿ ಲಕ್ಷಣ ಇರುವ 13 ಜನರಿಗೆ ಕಫ ಪರೀಕ್ಷೆ ಮತ್ತು 124 ಜನರಿಗೆ ಎಕ್ಸ್‌ರೇ ಹಾಗೂ ಆರೋಗ್ಯ ತಪಾಸಣೆ ಮಾಡಲಾಯಿತು.
ಕ್ಷಯ ಮೇಲ್ವಿಚಾರಕ ರವಿಶಂಕರ ಶುಕ್ಲಾ, ಭೀಮೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಈರಣ್ಣ, ಸಮುದಾಯ ಆರೋಗ್ಯ ಅಧಿಕಾರಿ ಜಾಫರ್, ಆಕಾಶ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿಲಕ್ಷ್ಮೀ, ಆಶಾ ಕಾರ್ಯಕರ್ತೆ ಮಲ್ಲಮ್ಮ, ಮಂಜುಳಾ ಇತರರಿದ್ದರು.