ಚನ್ನಬಸವ ಜಾನೇಕಲ್ 
ರಾಯಚೂರು

ಮೇ 25 ರಂದು ಉದ್ಯೋಗಾಂಕ್ಷಿಗಳ ಹೋರಾಟ

ರಾಚಯ್ಯ ಸ್ವಾಮಿ
ರಾಯಚೂರು 
ಉದ್ಯೋಗಾಂಕ್ಷಿಗಳ ಹೋರಾಟ ಸಮಿತಿಯಿಂದ ಮೇ 25 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ  ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ ಪ್ರಕಟಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆಂದು ಹೋರಾಟ ಸಮಿತಿ ರಾಜ್ಯ ಸಂಚಾಲಕ ಚನ್ನಬಸವ ಜಾನೇಕಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶಿಕ್ಷಕರ ನೇಮಕಾತಿ ನಡೆಸುವದಾಗಿ ಹೇಳುತ್ತಲೇ ಬಂದಿದ್ದಾರೆ ಹೊರತು ನೇಮಕಾತಿ ಪ್ರಕ್ರಿಯೆಗಳು ನಡೆಸುತ್ತಿಲ್ಲ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒಂದರಲ್ಲಿಯೇ 79,694 ಹುದ್ದೆಗಳು ಖಾಲಿಯಿವೆ. ಕಲ್ಯಾಣ ಕರ್ನಾಟಕ  ಜಿಲ್ಲೆಗಳಲ್ಲಿಯೇ 22,595 ಶಿಕ್ಷಕರ ಹುದ್ದೆಗಳು ಖಾಲಿಯಿವೆ. 18,317 ಪ್ರಾಥಮಿಕ ಮತ್ತು 4228 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿಯಿವೆ.
ಶಿಕ್ಷಕರೇ ಇಲ್ಲದೇ ದೇವದುರ್ಗ ತಾಲೂಕಿನ 105 ಶಾಲೆಗಳು ಅತಿಥಿ ಶಿಕ್ಷಕರ ಮೇಲೆ ನಡೆದಿವೆ. ಜೂನ್ ತಿಂಗಳಿನಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು, ಮತ್ತೆ ಅತಿಥಿ ಶಿಕ್ಷಕರ ನೇಮಕಾತಿ ನಡೆಸುದವಾಗಿ ಸರ್ಕಾರ ಹೇಳುತ್ತಿದೆ. ಶಿಕ್ಷಕರೇ ಇಲ್ಲದೇ ಗುಣಮಟ್ಟ ಶಿಕ್ಷಣ ನೀಡುವದಾಗಿ ಹೇಳುತ್ತಿರುವದು ವಂಚನೆಯಾಗಿದೆ. ಆದರಿಂದ  ನಿರ್ಲಕ್ಷ್ಯ ವಿರುದ್ಧ ನಡೆಯಲಿರುವ ಹೋರಾಟದಲ್ಲಿ ನಿರುದ್ಯೋಗಿ ಪದವೀಧರರು ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಹೋರಾಟ ಸಮಿತಿ ಜಂಟಿ ಕಾರ್ಯದರ್ಶಿ ವಿನೋದ ಕುಮಾರ, ಕಾಶಿನಾಥ ಗಿಲೇರಿ, ವೆಂಕಟೇಶ, ಅಮೀರ್, ನರಸನಗೌಡ, ಬಸವರಾಜ, ಹನುಮಂತ ಇದ್ದರು.