v.lakshmi-reddy 
ರಾಯಚೂರು

ಜೆಡಿಎಸ್ ಬೆಂಬಲಿಗರು ಕ್ಷಮೆಯಾಚನೆಗೆ ಒತ್ತಾಯ

ರಾಚಯ್ಯ ಸ್ವಾಮಿ
ರಾಯಚೂರು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ ಮೇಲೆ ನಡೆದ ಹಲ್ಲೆ ಘಟನೆ ಖಂಡನೀಯವಾಗಿದ್ದು,ಜೆಡಿಎಸ್ ಬೆಂಬಲಿಗರು ನಡೆಸಿದ ಹಲ್ಲೆಗೆ ಕ್ಷಮೆಯಾಚಿಸಬೇಕೆಂದು ಹಿಂದುಳಿದ ಜಾತಿಗಳ ಒಕ್ಕೂಟದ ನಗರ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಒತ್ತಾಯಿಸಿದರು.
ನಗರ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಂಪೆಗೌಡ ಜಯಂತಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಶಾಸಕರನ್ನು ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಲ್ಲದೇ ಶಾಸಕರ ಮೇಲೆ ಹಲ್ಲೆ ಯತ್ನಿಸಿರುವದು ಕಳವಳಕಾರಿ. ಕೇಂದ್ರ ಸಚಿವರಾಗಿರು ಎಚ್.ಡಿ.ಕುಮಾರಸ್ವಾಮಿಯವರು ಇತ್ತೀಚಿಗೆ ಕೇವಲ ಸಂಘರ್ಷ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಬೆಂಬಲಿಗರು ಶಾಸಕರ ನೂಕಿ ತಳ್ಳಾಟ ನಡೆಸಿ, ಚಪ್ಪಲಿ ತೂರಾಟವೂ ಮಾಡಿದ್ದಾರೆ. ಕೂಡಲೇ ಕ್ಷಮೆಯಾಚಿಸುವ ಮೂಲಕ ಅಂತ್ಯ ಹಾಡಬೇಕು. ಇಲ್ಲದೇ ಹೋದಲ್ಲಿ ತೀವ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಶರಣಬಸವ, ಬಿ.ಜಿ.ನಾಗರಾಜ, ನರಸಿಂಹಲು, ನರಸಪ್ಪ, ಈರೇಶ, ಬಸವರಾಜ, ರಮೇಶಗೌಡ, ಆನಂದ ಇದ್ದರು.