ಇರಕಲ್‌ನಲ್ಲಿ ಶ್ರೀ ಶಿವಶಕ್ತಿ ಸಂಗಮನಾಥ ಮಠದ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕನ್ನಡ ವಿವಿ ಅಧ್ಯಯನಾಂಗ ವಿಭಾಗದ ನಿರ್ದೇಶಕ ಅಮರೇಶ ಯತಗಲ್‌ಗೆ ಸಂಶೋಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶ್ರೀ ಮಠದ ಪೀಠಾಧಿಪತಿ ಬಸವಪ್ರಸಾದ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಈಶ್ವರಾನಂದ ಸ್ವಾಮೀಜಿ ಇತರರಿದ್ದರು.
- ಮಹಾಂತ ಸ್ವಾಮೀಜಿ ಮೆಚ್ಚುಗೆ
- ಕವಿತಾಳ ಇರಕಲ್ ಮಠ ಧಾರ್ಮಿಕ ಸಭೆ
ಕವಿತಾಳ: ಇರಕಲ್ ಮಠವು ಈ ಭಾಗದಲ್ಲಿ ಸಮಾಜ ಸೇವೆಯಿಂದ ಪ್ರಸಿದ್ಧಿ ಪಡೆದಿದ್ದು, ಶ್ರೀಮಠದ ಕಾರ್ಯವು ಶ್ಲಾಘನೀಯ ಎಂದು ಮುದಗಲ್-ತಿಮ್ಮಾಪುರ ಕಲ್ಯಾಣಾಶ್ರಮ ಮಠದ ಮಹಾಂತ ಸ್ವಾಮೀಜಿ ಹೇಳಿದರು.
ಇರಕಲ್ ಶ್ರೀ ಶಿವಶಕ್ತಿ ಸಂಗಮನಾಥ ಮಠದ ಜಾತ್ರೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ, ಸಾಧಕರಿಗೆ ಸನ್ಮಾನ ಮತ್ತು ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು. ಶ್ರೀ ಮಠವು ಅನ್ನದಾಸೋಹ, ಶಿಕ್ಷಣ ನೀಡುವುದರ ಜತೆಗೆ ನಿರ್ಗತಿಕರಿಗೆ ಆಶ್ರಯ ಕಲ್ಪಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದೆ ಎಂದರು.
ಸಂಶೋಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕನ್ನಡ ವಿವಿ ಅಧ್ಯಯನಾಂಗ ವಿಭಾಗದ ನಿರ್ದೇಶಕ ಅಮರೇಶ ಯತಗಲ್, ಇತಿಹಾಸದ ಮಹತ್ವದ ಘಟನೆಗಳನ್ನು ಸಂಶೋಧನೆ ಮಾಡಿ ಸಮಾಜಕ್ಕೆ ತಿಳಿಸುವ ಕಾರ್ಯವೇ ಸಂಶೋಧನೆಯಾಗಿದೆ. ಪ್ರತಿಯೊಬ್ಬರೂ ಇತಿಹಾಸದ ಪ್ರಾಮುಖ್ಯವನ್ನು ಅರಿಯಬೇಕು ಎಂದರು.
ಶ್ರೀ ಮಠದ ಪೀಠಾಧಿಪತಿ ಬಸವಪ್ರಸಾದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮೂಹಿಕ ವಿವಾಹದಲ್ಲಿ ಎಂಟು ಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟವು. ಉತ್ತಮ ಪೊಲೀಸ್ ಠಾಣೆ ಪ್ರಶಸ್ತಿ ಪಡೆದ ಕವಿತಾಳ ಪೊಲೀಸ್ ಠಾಣೆ ಪಿಎಸ್‌ಐ ಗುರುಚಂದ್ರ ಯಾದವ್, ಸೈನಿಕರು, ಮಾಜಿ ಸೈನಿಕರು, ರೈತ ದಂಪತಿಗಳಿಗೆ ಗೌರವಿಸಲಾಯಿತು.
ಕಾರ್ಯಕ್ರಮದ ನಂತರ ಶ್ರೀಗಳ ತುಲಾಭಾರ ಮತ್ತು ಸಂಜೆ ಉಚ್ಚಾಯ ಉತ್ಸವ ಅದ್ದೂರಿಯಾಗಿ ನೆರವೇರಿದವು. ಕುಂಚಟಗಿ ಸಂಸ್ಥಾನದ ಹೊಸದುರ್ಗದ ಶಾಂತವೀರ ಸ್ವಾಮೀಜಿ, ಭೋವಿ ಗುರುಪಿಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕನಕಗುರು ಪೀಠದ ಈಶ್ವರಾನಂದ ಸ್ವಾಮೀಜಿ, ಹಡಪದ ಹಪ್ಪಣ್ಣ ಗುರುಪೀಠದ ಅನ್ನದಾನ ಭಾರತೀ ಸ್ವಾಮೀಜಿ, ನಿಟ್ಟೂರು ನಾರಾಯಣ ಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಮುರುಗೇಂದ್ರ ಶಿವಯೋಗಿ, ಬಸವಗುಂಡಯ್ಯ ಸ್ವಾಮೀಜಿ, ಮೇದಾರ ಗುರುಪೀಠದ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಪ್ರಮುಖರಾದ ಅಮರೇಶಸ್ವಾಮಿ ಉಪ್ಪಳಮಠ, ಜಗದೀಶ್ಚಂದ್ರ ಸ್ವಾಮಿ ಹಾಲಾಪುರ, ಸರಸ್ವತಿ ಪಾಟೀಲ್, ಪ್ರಸನ್ನ ಪಾಟೀಲ್, ವೆಂಕನಗೌಡ ವಟಗಲ್, ಸೂಗನಗೌಡ, ಶಿಕ್ಷಕರಾದ ಅಮರೇಗೌಡ ಹರ್ವಾಪುರ, ಬಸವರಾಜ ಫಲಕನಮರಡಿ ಇತರರಿದ್ದರು.