ಗುರುಗುಂಟಾದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುರುಗುಂಟಾ ಕ್ಲಸ್ಟರ್ ಹಂತದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಗುರುಗುಂಟಾ, ಹಟ್ಟಿ ವಲಯ ಶಿಕ್ಷಣ ಸಂಯೋಜಕ ಬಸವರಾಜ ಕರಡಿ ಮಾತನಾಡಿದರು. ಪ್ರಮುಖರಾದ ನಂದೀಶನಾಯಕ, ನಾಗೇಶ, ವಿಜಯಕುಮಾರ ಇದ್ದರು.
ಗುರುಗುಂಟಾ: ವಿದ್ಯಾರ್ಥಿಗಳಿಗೆ ಶಿಕ್ಷಕರು ಮನಸ್ಥೈರ್ಯ ಹಾಗೂ ಆತ್ಮಸ್ಥೈರ್ಯ ತುಂಬಿಸುವ ಕಾರ್ಯ ಮಾಡಲಿ ಎಂದು ಗುರುಗುಂಟಾ, ಹಟ್ಟಿ ವಲಯ ಶಿಕ್ಷಣ ಸಂಯೋಜಕ ಬಸವರಾಜ ಕರಡಿ ಹೇಳಿದರು.
ಸ್ಥಳೀಯ ಸ.ಕಿ.ಪ್ರಾ.ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುರುಗುಂಟಾ ಕ್ಲಸ್ಟರ್ ಹಂತದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಶೈಕ್ಷಣಿಕ ಪ್ರಗತಿಗೆ ಸರ್ಕಾರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆದರೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗಿಲ್ಲ. ಸಮುದಾಯ ಸಹಭಾಗಿತ್ವದ ಕಾರ್ಯಕ್ರಮದಲ್ಲಿ ಪಾಲಕರು ಸಂಖ್ಯೆ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕಿ ಅಕ್ಕಮಹಾದೇವಿ ಉದ್ಘಾಟಿಸಿದರು. ಮುಖ್ಯಶಿಕ್ಷಕ ಅಶೋಕ, ಗುರುಗುಂಟಾ ವಲಯ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಬಡಿಗೇರ್, ರಾಜಗುರು ಶಿಕ್ಷಣ ಸಂಸ್ಥೆಯ ಆನಂದ ತುರ್ವಿಹಾಳ, ಗ್ರಾಪಂ ಉಪಾಧ್ಯಕ್ಷೆ ಪತಿ ನಂದೀಶನಾಯಕ, ಮುಖ್ಯ ಶಿಕ್ಷಕ ನಾಗೇಶ, ಎಸ್‌ಡಿಎಂಸಿ ಅಧ್ಯಕ್ಷ ವಿಜಯಕುಮಾರ ನಾಯಕ, ಗ್ರಾಪಂ ಸದಸ್ಯ ತಿರುಮುಲ, ಪ್ರಮುಖರಾದ ಚಂದಪ್ಪ ಕಟ್ಟಿಮನಿ, ಶಿವಕುಮಾರ್ ವಸ್ತ್ರದ್, ಅಮರೇಶ, ಮಾರುತಿ ಇದ್ದರು. ಗುರುಗುಂಟಾ ಕ್ಲಸ್ಟರ್ ಹಂತದ ಒಟ್ಟು 12 ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.