ಶಿರಸ್ತೇದಾರ್‌ಗೆ ಸೇವಾ ಸಂಘದ ತಾಲೂಕು ಘಟಕ ಮನವಿ  
ರಾಯಚೂರು

ಹಡಪದ ಅಪ್ಪಣ್ಣ ಮೂರ್ತಿ ಪ್ರತಿಷ್ಠಾಪಿಸಿ

ಪ್ರಮುಖ ಮುಖ್ಯಾಂಶಗಳು

  • ಬಸವಾದಿ
  • ಶರಣರ
  • ಅರಿವಿನ
ಸಿಂಧನೂರು: ಬೀದರ್ ಜಿಲ್ಲೆ ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಬಳಿಯ ಅರಿವಿನ ಗವಿಯಲ್ಲಿ ಹಡಪದ ಅಪ್ಪಣ್ಣ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿ ಹಡಪದ ಸೇವಾ ಸಂಘ ತಾಲೂಕು ಘಟಕ ಮಂಗಳವಾರ ತಹಸಿಲ್ ಕಚೇರಿಯ ಶಿರಸ್ತೇದಾರ್ ಶಿವಾನಂದಗೆ ಮನವಿ ಸಲ್ಲಿಸಿತು.
ಹನ್ನೆರಡನೇ ಶತಮಾನದ ಅನೇಕ ಬಸವಾದಿ ಶರಣರ ಅರಿವಿನ ಗವಿಗಳು ಇವೆ ಎಂದು ಇತಿಹಾಸ ಹೇಳುತ್ತದೆ. ಅದೇ ರೀತಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರ ಅರಿವಿನ ಗವಿಯೂ ಅಲ್ಲಿದೆ. ಆದರೆ ಶಿವಶರಣ ಹಡಪದ ಅಪ್ಪಣ್ಣ ಅವರ ಅರಿವಿನ ಗವಿಯಲ್ಲಿ ಬಸವೇಶ್ವರ ದೇವಸ್ಥಾನದ ಪಂಚಕಮಿಟಿಯವರು ಅಕ್ರಮವಾಗಿ ಹಸ್ತಕ್ಷೇಪ ಮಾಡಿ ಅನ್ಯ ಶರಣರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಇದರಿಂದ ಹಡಪದ ಅಪ್ಪಣ್ಣ ಅವರ ಅನುಯಾಯಿಗಳಿಗೆ ನೋವಾಗಿದೆ. ಕೂಡಲೇ ಹಡಪದ ಅಪ್ಪಣ್ಣ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ರಾಜುಗೌಡ ಬಾದರ್ಲಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬಸವ ಚಾರಿಟಬಲ್ ಅಧ್ಯಕ್ಷ ಶರಣಪ್ಪ ಟೆಂಗಿನಕಾಯಿ, ಮಲ್ಲಿಕಾರ್ಜುನ ವಗರನಾಳ, ಚಂದ್ರಗೌಡ ಹರೇಟನೂರು, ಎಚ್.ಎನ್.ಬಡಿಗೇರ, ಬಸವರಾಜ ಬಾದರ್ಲಿ, ನಾರಾಯಣ ಬೆಳಗುರ್ಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ಬೆಳಗುರ್ಕಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಡಿ.ಹಂಪಣ್ಣ, ಉಪಾಧ್ಯಕ್ಷ ಸಿದ್ದು ಮಾಡಸಿರವಾರ, ಮುಖಂಡರಾದ ರಾಜು ಕಾಟಾಪುರ, ಕಾರ್ಯದರ್ಶಿ ರಾಘು ಅಲ್ಲೂರು, ಶರಣಪ್ಪ ತೊಂಡಿಹಾಳ, ಈರಣ್ಣ ಅಲ್ಲೂರು, ಬಸವರಾಜಪ್ಪ ಪಿ.ಕುರುಕುಂದಿ, ಬಸವಲಿಂಗಪ್ಪ ಬಾದರ್ಲಿ ಇತರರಿದ್ದರು.
ಫೋಟೊ7ಎಸ್‌ಎನ್‌ಡಿ-03
ಸಿಂಧನೂರಿನಲ್ಲಿ ತಹಸಿಲ್ ಕಚೇರಿ ಶಿರಸ್ತೇದಾರ್ ಶಿವಾನಂದಗೆ ಹಡಪದ ಸೇವಾ ಸಂಘದ ತಾಲೂಕು ಘಟಕ ಮನವಿ ಸಲ್ಲಿಸಿತು. ಬಸವ ಚಾರಿಟಬಲ್ ಅಧ್ಯಕ್ಷ ಶರಣಪ್ಪ ಟೆಂಗಿನಕಾಯಿ, ಮಲ್ಲಿಕಾರ್ಜುನ ವಗರನಾಳ, ಚಂದ್ರಗೌಡ ಹರೇಟನೂರು, ಎಚ್.ಎನ್.ಬಡಿಗೇರ ಇತರರಿದ್ದರು.