ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ನಟರಾಜಗೆ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕರವೇ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಪ್ರಮುಖರಾದ ರವಿಕುಮಾರ ಬರಗೋಡಿ, ಅಲ್ಲಾಉದ್ದೀನ್ ಬಾಬಾ, ಮೋಸಿನ್ ಖಾನ್, ಮರಿಯಪ್ಪ ಹಟ್ಟಿ, ಅಜೀಜ್ ಪಾಷಾ, ಶಬ್ಬೀರ್, ವೀರೇಶ ಐದನಾಳ ಇತರರಿದ್ದರು. 
ರಾಯಚೂರು

ಸಿಸಿ ರಸ್ತೆಗೆ ರಬ್ಬರ್ ಹಂಪ್ಸ್ ಅಳವಡಿಸಿ

ಲಿಂಗಸುಗೂರು: ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆಗಳಿಗೆ ರಬ್ಬರ್ ಹಂಪ್ಸ್ ಅಳವಡಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ನಟರಾಜಗೆ ಮಂಗಳವಾರ ಮನವಿ ಸಲ್ಲಿಸಿದರು.
ಬಡಾವಣೆಗಳಲ್ಲಿ ಇತ್ತೀಚಿಗೆ ವಾಹನಗಳ ಸಂಚಾರ ಹೆಚ್ಚಾಗಿದ್ದು ಚಾಲಕರು ಅತಿ ವೇಗದಲ್ಲಿ ಓಡಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು, ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ರಸ್ತೆ ದಾಟುವಾಗ ಅಪಾಯ ಎದುರಿಸುತ್ತಿದ್ದಾರೆ. ವಿಶೇಷವಾಗಿ ಶಾಲೆ, ಅಂಗನವಾಡಿ, ದೇವಸ್ಥಾನ, ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಜನವಸತಿ ಪ್ರದೇಶಗಳ ಬಳಿ ಯಾವುದೇ ವೇಗ ನಿಯಂತ್ರಕ ವ್ಯೆವಸ್ಥೆ ಇಲ್ಲದ ಕಾರಣ ಅಪಘಾತ ಸಂಭವಿಸುವ ಆತಂಕ ಹೆಚ್ಚಾಗಿದೆ. ಸಾರ್ವಜನಿಕರ ಸುರಕ್ಷತೆಗೆ ಸಿಸಿ ರಸ್ತೆಗಳಲ್ಲಿ ರಬ್ಬರ್ ಹಂಪ್ಸ್ ಅಳವಡಿಸುವ ಅಗತ್ಯವಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದರೆ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.