ರಾಯಚೂರಿನ ನೀರಭಾವಿಕುಂಟೆ ಕೆರೆಯ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಮಾಜಿ ಸಚಿವ ಎನ್.ಎಸ್.ಬೋಸರಾಜು ಗುರುವಾರ ಭೇಟಿ ನೀಡಿದರು. ಸಂಸದ ಜಿ.ಕುಮಾರ ನಾಯಕ, ಮಾಜಿ ಶಾಸಕ ಎ.ಪಾಪರೆಡ್ಡಿ, ಪ್ರಮುಖರಾದ ಕೆ.ಶಾಂತಪ್ಪ, ಜಯವಂತರಾವ್ ಪತಂಗೆ, ಲಕ್ಷ್ಮೀರಡ್ಡಿ, ಶೇಖರರೆಡ್ಡಿ, ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ ಇದ್ದರು. 
ರಾಯಚೂರು

ನೀರಭಾವಿ ಕುಂಟೆ ಹಾಗೂ ಯಲ್ಲಮ್ಮ ಕೆರೆ ಕಾಮಗಾರಿ ವಿಕ್ಷೇಣೆ

ಪ್ರಮುಖ ಮುಖ್ಯಾಂಶಗಳು

  • ಕೆರೆ ಅಭಿವೃದ್ಧಿ ಕಾಮಗಾರಿ ಚುರುಕುಗೊಳಿಸಿ- ಎನ್‌ಎಸ್‌ಬಿ
ರಾಯಚೂರು
ಕೆರೆ-ಕಟ್ಟೆಗಳ ಸಂರಕ್ಷಣೆಗೆ ಹಾಗೂ ಅಂತರ್ಜಲ ವೃದ್ಧಿಗಾಗಿ ವೈಜ್ಞಾನಿಕ ಯೋಜನೆಗಳ ಮೂಲಕ ನೀರಭಾವಿಕುಂಟಾ ಕೆರೆಯನ್ನು ಅಭಿವೃದ್ಧಿಪಡಿಸಲು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಧಿಕಾರಿಗಳು ತ್ವರಿತಗತಿಯಲ್ಲಿ ಗುಣಮಟ್ಟದೊಂದಿಗೆ ಕಾಮಗಾರಿ ನಿರ್ವಹಿಸಬೇಕೆಂದು ಮಾಜಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದ ನೀರಭಾವಿಕುಂಟೆ ಹಾಗೂ ಯಲ್ಲಮ್ಮ ಕೆರೆಯ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದರು. ಪುರಾತನ ಕಾಲದಿಂದಲೂ ನಾವೆಲ್ಲರು ಕೆರೆ-ಕಟ್ಟೆಗಳ ನೀರಿನ ಮೇಲೆ ಅವಲಂಬನೆಯಾಗಿದ್ದೇವೆ. ಅಲ್ಲದೆ ಅನೇಕ ಜಲಚರ ಪ್ರಾಣಿ-ಪಕ್ಷಿಗಳು ಅವಲಂಬನೆಯಾಗಿರುವುದರಿಂದ ಅಂತರ್ಜಲ ಸಮೃದ್ಧಿಗಾಗಿ ನನ್ನ ಜವಾಬ್ದಾರಿಯ ಸಣ್ಣ ನೀರಾವರಿ ಹಾಗೂ ಅಂತರ್ಜಲ ಇಲಾಖೆ ವತಿಯಿಂದ ಕೆರೆ ಕಟ್ಟೆಗಳ ಪುನಶ್ಚೇನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಿಸಬೇಕು.
ಸಾರ್ವಜನಿಕರು ಯಾವುದೇ ತ್ಯಾಜ್ಯವನ್ನು ಕೆರೆಗೆ ಬಿಡದಂತೆ ಸ್ವಚ್ಚತೆಯಿಂದ ಕಾಪಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯಕ, ಮಾಜಿ ಶಾಸಕ ಎ.ಪಾಪರೆಡ್ಡಿ, ಪ್ರಮುಖರಾದ ಕೆ.ಶಾಂತಪ್ಪ, ಜಯವಂತರಾವ್ ಪತಂಗೆ, ಲಕ್ಷ್ಮೀರಡ್ಡಿ, ಶೇಖರರೆಡ್ಡಿ, ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಬಸವರಾಜ ಪಾಟೀಲ್, ನರಸಿಂಹಲು ಮಾಡಗಿರಿ, ಗೋವಿಂದರೆಡ್ಡಿ ಇದ್ದರು.