ಬುದ್ದಿನ್ನಿ ಚಿನ್ನದಗಣಿಯಲ್ಲಿ ಗಿರ್ಕಿ ಬಂಡಿ ಎಳೆಯುವ ಸ್ಪರ್ಧೆ ನಡೆಯಿತು.
ಕವಿತಾಳ: ಭಾರತ ಹಳ್ಳಿಗಳಿಂದ ಕೂಡಿದ್ದು, ಬಹುಪಾಲು ರೈತರಿದ್ದಾರೆ. ಆದ್ದರಿಂದ ಕೃಷಿಕರಿಗೆ ಅನುಕೂಲವಾಗುವ ಆಟೋಟಗಳನ್ನು ಆಯೋಜಿಸಿ ಪ್ರೋತ್ಸಾಹಿಸಬೇಕು ಎಂದು ನವಲಕಲ್ ಬ್ರಹನ್ಮಠದ ಸೋಮನಾಥ ಶಿವಾಚಾರ್ಯರು ಹೇಳಿದರು.
ಚಿಂಚರಕಿ ಗ್ರಾಪಂ ವ್ಯಾಪ್ತಿಯ ಬುದ್ದಿನ್ನಿ ಚಿನ್ನದಗಣಿ ಗ್ರಾಮದ ರೈತರಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗಿರ್ಕಿ ಬಂಡಿ ಎಳೆಯುವ ಸ್ಪರ್ಧೆಯಲ್ಲಿ ಮಾತನಾಡಿದರು. ಯುವ ರೈತರು ದೇಸಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ದೇಶದಲ್ಲಿ ರೈತರಿಗೆ ಉಪಯೋಗವಾಗುವ ಕ್ರೀಡೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದರು. ಮುಕ್ಕಣ್ಣ ಕುರುಬರ ಎತ್ತುಗಳು-ಪ್ರಥಮ, ಶಿವಣ್ಣ ಜಿನ್ನಾಪುರ ಎತ್ತುಗಳು-ದ್ವಿತೀಯ, ಹನುಮಂತ ದೇಸಾಯಿ ಎತ್ತುಗಳು ತೃತೀಯ ಸ್ಥಾನ ಪಡೆದವು. ಪ್ರಮುಖರಾದ ಅಯ್ಯಪ್ಪ ತಾತ ಹೀರಾ, ಸಿದ್ದನಗೌಡ ಮಾಲಿಪಾಟೀಲ್, ಯಂಕನಗೌಡ, ಲಕ್ಷ್ಮಣ ಭೋವಿ, ಮಹೇಶ ಬಾಗೂರ, ದುರುಗಣ್ಣ ಜಿನ್ನಪೂರ, ಬಸನಗೌಡ, ರಾಮನಗೌಡ ಜಿನ್ನಪುರ ಇತರರಿದ್ದರು.