MAREPPA HARAVI 
ರಾಯಚೂರು

ಮೇ.01 ರಿಂದ ಅನಿರ್ಧಿಷ್ಠಾವಧಿ ಧರಣಿ

ರಾಚಯ್ಯ ಸ್ವಾಮಿ
ರಾಯಚೂರು ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮತ್ತು ವಸತಿ ನೀಡದಿದ್ದರೆ ಮೇ.1 ರಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಾಡು ಇಲ್ಲವೇ ಮಡಿ ಚಳವಳಿ ಭಾಗವಾಗಿ ಅನಿರ್ಧಿಷ್ಠಾವಧಿ ಧರಣಿ ಹಮ್ಮಿಕೊಳ್ಳಲಾಗುವುದೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಂಚಾಲಕ ಮಾರೆಪ್ಪ ಹರವಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 5 ದಶಕಗಳಿಂದ ಲಕ್ಷಾಂತರ ಬಗರ್ ಹುಕುಂ ಸಾಗುವಳಿದಾರರು ಭೂಮಿ ಹಕ್ಕಿಗಾಗಿ ಹಾಗೂ ವಸತಿ ವಂಚಿತರು ಸೂರಿಗಾಗಿ ಕಾಯುತ್ತಿದ್ದು, ಸರ್ಕಾರಗಳು ಭರವಸೆಗಳನ್ನು ಬಿಟ್ಟರೇ ಬೇರೇನೂ ನೀಡಿಲ್ಲ ಎಂದರು.
ಕಾರ್ಪೊರೇಟ್ ಕಂಪನಿಗಳಿಗೆ, ಶ್ರೀಮಂತರಿಗೆ ಭೂಮಿ ನೀಡಲು ಸಿಂಗಲ್ ವಿಂಡೋ ಸ್ಥಾಪಿಸಿ, ಬಡವರ ಭೂಮಿ ಹಕ್ಕಿನ ಕುರಿತು ಕಾನೂನು ನೆಪಗಳನ್ನು ಹೇಳುತ್ತಿವೆ. ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕಾನೂನು ಬಿಗಿ ಇರುವ ಕಾರಣ ಭೂಮಿ ಕೊಡಲು ಆಗುವುದಿಲ್ಲ ಎಂಬ ಹೇಳಿಕೆ ನೀಡಿದ್ದು, ಇದು ಬಡವರಿಗೆ ಅನ್ಯಾಯ ಮಾಡುವ ಹುನ್ನಾರವಾಗಿದೆ. ಸರ್ಕಾರದಲ್ಲಿ ಕಾರ್ಪೋರೇಟ್, ಬಂಡವಾಳ ಶಾಹಿಗಳಿಗೆ ಭೂಮಿ ಕೊಡಲು ಅವಕಾಶ ಇದ್ದು, ಬಡವರಿಗೆ ನೀಡಲು ಕೊಡಲು ಆಗುವುದಿಲ್ಲ ಏಕೆ ಕೂಡಲೇ ಕಾನೂನು ಸಡಲಿಕೆ ಮಾಡಿ, ಭೂಮಿ ಮತ್ತು ವಸತಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಗದ ಪ್ರಮುಖರಾದ ಆಂಜನೇಯ್ಯ, ರಂಗಾರೆಡ್ಡಿ, ಬಿ.ಎನ್.ಯರದಿಹಾಳ, ಹುಲಿಗೇಪ್ಪ ಇದ್ದರು.