ರಾಜ್ಯ ಕೃಷಿ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳು ಮತ್ತು ಇಲಾಖೆಯ ಅವೈಜ್ಞಾನಿಕ ನೀತಿಗಳನ್ನು ಖಂಡಿಸಿ ಸೋಮವಾರ ರಾಯಚೂರಿನ ಕೃಷಿ ವಿವಿಯ ಆಡಳಿತ ಕಚೇರಿ ಮುಂದೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡಿದರು. ವಿದ್ಯಾರ್ಥಿಗಳಾದ ಅಂಕೇಶ ಅಂಬಾನಿ,ಶಿವಪ್ಪ, ಸತೀಶ, ಸಾದನಂದ ಬಿ. ಪೂಜಾರಿ,ಸುಖಾನ್ಯ, ಶ್ರೀಧರ ನಾಯಕ್, ರೋಹನ್,ತೇಜಸ್, ಭೀಮಮ್ಮ,ಮಹಾಲಕ್ಷ್ಮೀ,ಅರ್ಪಿತಾ ಇದ್ದರು. 
ರಾಯಚೂರು

ಕೃಷಿ ಇಲಾಖೆಯ ಅಕ್ರಮ ನೇಮಕಾತಿ ಖಂಡಿಸಿ ಅನಿರ್ದಿಷ್ಟಾವಧಿ ಧರಣಿ

ರಾಯಚೂರು
ರಾಜ್ಯ ಕೃಷಿ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳು ಮತ್ತು ಇಲಾಖೆಯ ಅವೈಜ್ಞಾನಿಕ ನೀತಿಗಳನ್ನು ಖಂಡಿಸಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ನಗರದ ಕೃಷಿ ವಿವಿಯ ಆಡಳಿತ ಕಚೇರಿ ಮುಂದೆ ಸೋಮವಾರ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡಿದರು.

ರಾಜ್ಯ ಕೃಷಿ ಇಲಾಖೆಯ ನೇಮಕಾತಿಯಲ್ಲಿ ಅಸ್ತಿತ್ವದಲ್ಲಿರುವ ಸಿ ಮತ್ತು ಆರ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಬಿಇ ಪದವೀಧರರಿಗೆ ಹಾಗೂ ಐಸಿಎಆರ್ ಮಾನ್ಯತೆ ಪಡೆಯದ ಖಾಸಗಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೃಷಿ ಶಿಕ್ಷಣದ ಗುಣಮಟ್ಟ ಕಾಪಾಡುವ ಬದಲು, ಕೇವಲ ಹಣಗಳಿಕೆಯ ಉದ್ದೇಶದಿಂದ ನಡೆಯುತ್ತಿರುವ ಮಾನ್ಯತೆ ಇಲ್ಲದ ಖಾಸಗಿ ಕೃಷಿ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಸರ್ಕಾರ ಜಾರಿಗೆ ತಂದಿರುವ ದೇಸಿ ಪ್ರೋಗ್ರಾಂನಿಂದ ಕೃಷಿ ಪದವೀಧರರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದ್ದು, ಇದರಿಂದ ರೈತರಿಗೂ ಮತ್ತು ಕೃಷಿ ವ್ಯವಸ್ಥೆಗೂ ದೊಡ್ಡ ಮಟ್ಟದ ಹಾನಿಯಾಗುತ್ತಿದೆ. ಕೃಷಿ ಇಲಾಖೆಯ ಈ ಅವ್ಯವಸ್ಥೆಗಳು ಕೃಷಿ ಪದವೀಧರರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ನಮ್ಮ ಭವಿಷ್ಯವನ್ನೇ ಕಸಿದುಕೊಳ್ಳುವ ಇಲಾಖೆಯ ಈ ನಡೆಗಳನ್ನು ಮೌನವಾಗಿ ಸಹಿಸಲು ಸಾಧ್ಯವಿಲ್ಲ. ನಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಅಂತಿಮ ಹಂತದ ಹೋರಾಟಕ್ಕೆ ಸಿದ್ಧರಾಗಿದ್ದೇವೆ ಹಾಗೂ ಸಮಸ್ಯೆ ಬಗೆ ಹರಿಯುವ ವರೆಗೆ ಈ ಧರಣಿ ನಿಲ್ಲುವುದಿಲ್ಲವೆಂದು ವಿದ್ಯಾರ್ಥಿಗಳು ಎಚ್ಚರಿಸಿದಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅಂಕೇಶ ಅಂಬಾನಿ,ಶಿವಪ್ಪ, ಸತೀಶ, ಸಾದನಂದ ಬಿ. ಪೂಜಾರಿ,ಸುಖಾನ್ಯ, ಶ್ರೀಧರ ನಾಯಕ್, ರೋಹನ್,ತೇಜಸ್, ಭೀಮಮ್ಮ,ಮಹಾಲಕ್ಷ್ಮೀ,ಅರ್ಪಿತಾ ಸೇರಿ ಅನೇಕರು ಇದ್ದರು.