ಜಾಲಿಹಾಳ ಸರ್ಕಾರಿ ಪಪೂ ಕಾಲೇಜಿನಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕಾಲೇಜಿಗೊಂದು ಚುಟುಕು ಚಂದನ ಕಾರ್ಯಕ್ರಮದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಘನಮಠದಯ್ಯಸ್ವಾಮಿ, ಚುಸಾಪ ತಾಲೂಕು ಅಧ್ಯಕ್ಷ ಎಂ.ಭಾಸ್ಕರ್, ಜಿಲ್ಲಾ ಗೌರವಾಧ್ಯಕ್ಷ ಬೀರಪ್ಪ ಶಂಭೋಜಿ ಇತರರಿದ್ದರು. 
ರಾಯಚೂರು

ಶಬ್ದ ಸಂಪತ್ತು ಹೆಚ್ಚಿಸಿಕೊಂಡು ಚುಟುಕು ರಚಿಸಿ

ಪ್ರಮುಖ ಮುಖ್ಯಾಂಶಗಳು

  • ದಸಾಪ ಜಿಲ್ಲಾಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ಸಲಹೆ
  • ಸಿಂಧನೂರು ಚುಟುಕು ಚಂದನ ಕಾರ್ಯಕ್ರಮ
ಸಿಂಧನೂರು: ಕಡಿಮೆ ಶಬ್ದಗಳನ್ನು ಬಳಸಿ ಅರ್ಥಗರ್ಭಿತ ಚುಟುಕು ರಚನೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕೆಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ಹೇಳಿದರು.
ಜಾಲಿಹಾಳ ಸರ್ಕಾರಿ ಪಪೂ ಕಾಲೇಜಿನಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕಾಲೇಜಿಗೊಂದು ಚುಟುಕು ಚಂದನ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಚುಟುಕುಗಳ ಜನಪ್ರಿಯತೆ’ ಕುರಿತು ಉಪನ್ಯಾಸ ನೀಡಿದರು. ನಾಲ್ಕು ಸಾಲಿನ ಚುಟುಕು ರಚಿಸುವುದು ಸುಲಭವಲ್ಲ. ಹಿರಿಯ ಕವಿಗಳು, ಸಾಹಿತಿಗಳ ಕವನ, ಚುಟುಕು, ಕತೆಗಳನ್ನು ಓದುವುದರ ಮೂಲಕ ಶಬ್ದ ಸಂಪತ್ತು ಹೆಚ್ಚಿಸಿಕೊಂಡು ಕವನ, ಚುಟುಕುಗಳನ್ನು ರಚಿಸಲು ಪ್ರಯತ್ನಿಸಬೇಕು. ದೀರ್ಘವಾದ ಕವನ, ಕಥೆ, ಕಾದಂಬರಿಗಳನ್ನು ಓದುವುದು ಪ್ರಸ್ತುತ ದಿನಗಳಲ್ಲಿ ಸಾಧ್ಯವಾಗುತ್ತಿಲ್ಲ. ಹೇಳುವ ವಿಷಯವನ್ನು ಚಿಕ್ಕ-ಚೊಕ್ಕದಾಗಿ, ಮಿಂಚಿನಂತೆ ಹೊಳೆವ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚುಟುಕುಗಳನ್ನು ರಚಿಸಬೇಕೆದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಘನಮಠದಯ್ಯಸ್ವಾಮಿ, ಚುಸಾಪ ತಾಲೂಕು ಅಧ್ಯಕ್ಷ ಎಂ.ಭಾಸ್ಕರ್ ಯೋಗ, ಜಿಲ್ಲಾ ಗೌರವಾಧ್ಯಕ್ಷ ಬೀರಪ್ಪ ಶಂಭೋಜಿ ಮಾತನಾಡಿದರು. ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಹುಸೇನಪ್ಪ ಅಮರಾಪುರ, ಕಾಲೇಜ್ ಪ್ರಾಚಾರ್ಯ ಮುರಡಯ್ಯಸ್ವಾಮಿ, ಜಾಲಿಹಾಳ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಮಾಳಪ್ಪ ಬರಸಿ, ಉಪನ್ಯಾಸಕರಾದ ವಿಜಯಕುಮಾರ, ವೆಂಕಟೇಶ, ಅತಿಥಿ ಉಪನ್ಯಾಸಕರಾದ ಬಸವರಾಜ, ಸುನೀತಾ ಇದ್ದರು.