ಮುದಗಲ್: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಲು ಸಂಘ-ಸಂಸ್ಥೆಗಳ ಸಹಕಾರ ಮುಖ್ಯವಾಗಿದೆ ಎಂದು ಶಿಕ್ಷಣ ಸಂಯೋಜಕ ಬಸವರಾಜ ಕರಡಿ ಅಭಿಪ್ರಾಯಪಟ್ಟರು.
ಗೋಸಲರಾಯನಪೇಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಯೂತ್ ಫಾರ್ ಸೇವಾ ಸಂಸ್ಥೆಯಿಂದ ಉಚಿತವಾಗಿ ನೋಟ್ ಪುಸ್ತಕ, ಬ್ಯಾಗ್‌ಗಳನ್ನು ವಿತರಿಸಿ ಸೋಮವಾರ ಮಾತನಾಡಿದರು. ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾಕಷ್ಟು ದೇಣಿಗೆ ಹಾಗೂ ಪಠ್ಯ ಸಾಮಗ್ರಿಗಳನ್ನು ನೀಡುತ್ತಿವೆ ಎಂದು ತಿಳಿಸಿದರು.
ಪುರಸಭೆ ಮಾಜಿ ಸದಸ್ಯೆ ಮಹಾಲಕ್ಷ್ಮೀ ಯಾದವ್, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಗೋಸಲಪ್ಪ, ಮುಖ್ಯಶಿಕ್ಷಕಿ ಶ್ರುತಿ ಇತರರಿದ್ದರು.