ಸಿಂಧನೂರು ಏಳುರಾಗಿ ಕ್ಯಾಂಪ್‌ನಲ್ಲಿ ಅಭಯಾಂಜನೇಯಸ್ವಾಮಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ಸೋಮವಾರ ನಡೆಯಿತು. 
ರಾಯಚೂರು

ಅಭಯಾಂಜನೇಯಸ್ವಾಮಿ ದೇವಸ್ಥಾನ ಉದ್ಘಾಟನೆ

ಸಿಂಧನೂರು: ನಗರದ ಏಳುರಾಗಿ ಕ್ಯಾಂಪ್‌ನಲ್ಲಿ ನಿರ್ಮಾಣಗೊಂಡ ಶ್ರೀ ಅಭಯಾಂಜನೇಯಸ್ವಾಮಿ ದೇವಸ್ಥಾನದ ಶಿಖರ ಪ್ರತಿಷ್ಠಾಪನೆ ಮತ್ತು ಶ್ರೀ ಮಹಾಗಣಪತಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವು ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗಿನ ಜಾವ ಗಣಪತಿ ಪೂಜೆ, ಪ್ರಧಾನ ಹೋಮಗಳು, ಪೂರ್ಣಾಹುತಿ, ಗರ್ತನ್ಯಾಸ, ಯಂತ್ರನ್ಯಾಸ ಪ್ರತಿಷ್ಠಾ, ಶಿಖರ ಪ್ರತಿಷ್ಠಾ, ಪ್ರತಿಷ್ಠಾ ನಂತರ ಮಹಾಪೂಜೆ ನಡೆಯಿತು. ಪುರಸಭೆ ಮಾಜಿ ಸದಸ್ಯ ತಾಳ್ಳೂರಿ ಸುಬ್ಬಾರಾವು ದಂಪತಿ ಹಾಗು ಪ್ರಮುಖರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಬಿಜೆಪಿ ಮುಖಂಡ ಕೆ.ಕರಿಯಪ್ಪ ಸೇರಿದಂತೆ ಕ್ಯಾಂಪ್‌ನ ಭಕ್ತರು ದರ್ಶನ ಪಡೆದರು.
ಸನ್ಮಾನ: ಅಭಯಾಂಜನೇಸ್ವಾಮಿ ದೇವಸ್ಥಾನ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ತಾಳ್ಳೂರಿ ಸುಬ್ಬಾರಾವ್ ಅವರನ್ನು ವಿಶ್ವ ಹಿಂದೂಪರಿಷತ್ ಮತ್ತು ಭಜರಂಗದಳದ ಪದಾಧಿಕಾರಿಗಳು ಸನ್ಮಾನಿಸಿದರು. ಜಿಲ್ಲಾ ಧರ್ಮ ಪ್ರಚಾರಕ ಜಿ.ಕೆ.ವಿಶ್ವನಾಥ ಚೌಧರಿ, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ನೆಕ್ಕಂಟಿ ಸುರೇಶ, ವಿಎಚ್‌ಪಿ ತಾಲೂಕು ಅಧ್ಯಕ್ಷ ದೇವರಾಜ ಪಾಟೀಲ್, ಉಪಾಧ್ಯಕ್ಷ ರಾಮಾಂಜನೇಯಲು, ಕಾರ್ಯದರ್ಶಿ ನಾಗೇಶ ಪವಾರ್ ಇತರರಿದ್ದರು.