ತುರ್ವಿಹಾಳದಲ್ಲಿ ರಸ್ತೆ ವಿಸ್ತರಣೆ, ಡಾಂಬರೀಕರಣ ಕಾಮಗಾರಿಗೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಭೂಮಿಪೂಜೆ ನೆರವೇರಿಸಿದರು. ಪಪಂ ಅಧ್ಯಕ್ಷ ಬಾಪುಗೌಡ, ಪ್ರಮುಖರಾದ ಮಲ್ಲನಗೌಡ ದೇವರಮನಿ, ಬಾಪುಗೌಡ, ಸಿರಾಜ್ ಪಾಷಾ ಇತರರಿದ್ದರು.
ಸಿಂಧನೂರು: ತುರ್ವಿಹಾಳ ಪಟ್ಟಣದಲ್ಲಿ ಎರಡನೇ ವಾರ್ಡ್ ರಸ್ತೆ ವಿಸ್ತರಣೆ, ಡಾಂಬರೀಕರಣ, ಚರಂಡಿ ನಿರ್ಮಾಣ, ಸ್ಟ್ರೀಟ್ ಲೈಟ್ ಅಳವಡಿಕೆ ಕಾಮಗಾರಿಗೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ಕಾಮಗಾರಿ ಕಾಲಮಿತಿಯಲ್ಲಿ ಮಾಡಬೇಕು. ಒಂದು ವೇಳೆ ಗುತ್ತಿಗೆದಾರರು ಮಾಡುವ ಕೆಲಸದಲ್ಲಿ ಕಳಪೆ ಕಂಡು ಬಂದರೆ ಕೂಡಲೇ ನನ್ನ ಗಮನಕ್ಕೆ ತಂದರೆ ಸರಿಪಡಿಸುವ ಕೆಲಸ ಮಾಡುತ್ತೇನೆ.
ನಮ್ಮ ಸರ್ಕಾರ ಮೂಲಸೌಕರ್ಯಗಳಿಗೆ ಒತ್ತು ನೀಡುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕೆ ಬದ್ಧವಾಗಿದೆ ಎಂದು ಶಾಸಕ ತುರ್ವಿಹಾಳ ತಿಳಿಸಿದರು.
ಪ್ರಮುಖರಾದ ಮಲ್ಲನಗೌಡ ದೇವರಮನಿ, ಪಪಂ ಅಧ್ಯಕ್ಷ ಬಾಪುಗೌಡ, ಎಂ.ಡಿ.ಫಾರೂಕ್‌ಸಾಬ್ ಖಾಜಿ, ಆರ್.ಶಿವನಗೌಡ, ಸಿರಾಜ್ ಪಾಷಾ ದಳಪತಿ, ಶರಣಪ್ಪ ಹೊಸಗೌಡ್ರ, ಅಬುತರಬ್, ಕರಿಯಪ್ಪ ವಿರುಪಾಪುರ, ದೊಡ್ಡಪ್ಪ ಕಲ್ಗುಡಿ, ನಿಂಗಪ್ಪ ಗೊಸಬಾಳ, ಬಸನಗೌಡ, ಅನ್ವರ್ ಪಾಷಾ, ಹೊನ್ನೂರಪ್ಪ, ಕೋಮಾರಪ್ಪ, ರಾಮಣ್ಣ, ಅರವಿಂದರೆಡ್ಡಿ, ಎಇ ಕಾಶಿನಾಥ ಇದ್ದರು.