ಸಿಂಧನೂರಿನ ತಹಸಿಲ್ ಕಚೇರಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಅರುಣ್ ದೇಸಾಯಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ಶರಣಪ್ಪ ತೆಂಗಿನಕಾಯಿ, ಪ್ರಮುಖರಾದ ವೀರಭದ್ರಗೌಡ ಅಮರಾಪುರ, ಎಚ್.ಎನ್.ಬಡಿಗೇರ್, ಚಂದ್ರಗೌಡ ಬಾದರ್ಲಿ ಇತರರಿದ್ದರು. 
ರಾಯಚೂರು

ಮಾನವೀಯ ಮೌಲ್ಯಗಳು ಸರ್ವಕಾಲಕ್ಕೂ ಪ್ರಸ್ತುತ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಅರುಣ್ ದೇಸಾಯಿ ಅನಿಸಿಕೆ
  • ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಸಿಂಧನೂರು: ಹಡಪದ ಅಪ್ಪಣ್ಣನವರು ಸಮಾನತೆ, ಶ್ರಮದ ಗೌರವ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಸಂತ. ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ತಹಸೀಲ್ದಾರ್ ಅರುಣ್ ದೇಸಾಯಿ ಹೇಳಿದರು.
ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣನವರ 892ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹನೀಯರು ತೋರಿಸಿದ ಸತ್ಯ, ಸೇವೆ, ಸಾಮಾಜಿಕ ಸೌಹಾರ್ದತೆ ಮಾರ್ಗವನ್ನು ಅಳವಡಿಸಿಕೊಳ್ಳಲು ಜಯಂತಿ ಆಚರಿಸಲಾಗುತ್ತದೆ. ಯುವಕರು ಅವರ ವಿಚಾರಗಳ ಪ್ರೇರಣೆ ಪಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಕೆ.ಶರಣಪ್ಪ ತೆಂಗಿನಕಾಯಿ, ತಾಪಂ ಮಾಜಿ ಸದಸ್ಯ ಚಂದ್ರಭೂಪಾಲ ನಾಡಗೌಡ, ಹಡಪದ ಸಮಾಜದ ಮಹಿಳಾ ಅಧ್ಯಕ್ಷೆ ರೇಣುಕಾ, ಪ್ರಮುಖರಾದ ವೀರಭದ್ರಗೌಡ ಅಮರಾಪುರ, ಎಚ್.ಎನ್.ಬಡಿಗೇರ್, ಚಂದ್ರೇಗೌಡ ಹರಟೆನೂರು, ಚಂದ್ರಗೌಡ ಬಾದರ್ಲಿ, ಮಲ್ಲಿಕಾರ್ಜುನ ಜೀನೂರು, ರಾಮು, ಮಲ್ಲಪ್ಪ ಹುಡ, ಮುದುಕಪ್ಪ, ಶರಣಪ್ಪ, ಕಾಶಣ್ಣ, ಈರಣ್ಣ, ನಾಗೇಶ, ಸಿದ್ದು, ಗುರಪ್ಪ, ರಾಜು, ಜಗದೀಶ, ನಾಗರತ್ನಾ, ರೇಖಾ ಇದ್ದರು.