ಸಿರವಾರದಲ್ಲಿ ತಹಸೀಲ್ದಾರ್ ಅಶೋಕ ಪವಾರ್‌ಗೆ ಮಾದಿಗ ಒಳಮೀಸಲಾತಿ ಐಕ್ಯ ಹೋರಾಟ ಸಮಿತಿ ಮನವಿ ಸಲ್ಲಿಸಿತು. ಸಮಿತಿ ಜಿಲ್ಲಾಧ್ಯಕ್ಷ ಅಬ್ರಾಹಂ ಹೊನ್ನಟಗಿ, ಎಂ.ಪ್ರಕಾಶಪ್ಪ, ಬಡ್ಡ ಹನುಮಂತ, ಹರಳಪ್ಪ ಯದ್ದಲದಿನ್ನಿ, ಅಜಿತ್ ಕುಮಾರ ಹೊನ್ನಟಗಿ, ಸಾಮೇಲಪ್ಪ ನ್ಯಾಯಬೆಲೆ, ಮಾರ್ಕಂಡಪ್ಪ, ಬಸವರಾಜ ಭಂಡಾರಿ, ಮಲ್ಲಪ್ಪ ನಾರಬಂಡಿ ಇದ್ದರು.
ಸಿರವಾರ: ಎಸ್ಸಿ ಒಳಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾದಿಗ ಒಳಮೀಸಲಾತಿ ಐಕ್ಯ ಹೋರಾಟ ತಾಲೂಕು ಘಟಕದಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.
ಸಮಿತಿ ಜಿಲ್ಲಾಧ್ಯಕ್ಷ ಅಬ್ರಾಹಂ ಹೊನ್ನಟಗಿ ಮಾತನಾಡಿ, ಪರಿಶಿಷ್ಟ ಜಾತಿಗಳಿಗೆ ಸಂಪೂರ್ಣ ಒಳ ಮೀಸಲಾತಿ ಜಾರಿಗೊಳಿಸದೆ ಮತ್ತು ಒಳ ಮೀಸಲಾತಿ ಅನ್ವಯಿಸದೆ 56432 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗಿರುವ ಕ್ರಮ ಖಂಡನೀಯ. ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿನ ಶೇ.15 ಮೀಸಲಾತಿಯಲ್ಲಿ ಆಯಾ ಜನಸಂಖ್ಯಾವಾರು ಒಳ ಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯ 30-35 ವರ್ಷ ಹೋರಾಟ ಮಾಡಿದೆ. ಸರ್ಕಾರ ನಡೆಸಿದ ಎಲ್ಲ ಪಕ್ಷಗಳು ಹಾಗೂ ಸರ್ವರ ಗಮನಕ್ಕೂ ಇದೆ. ಆದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರವು ನಮ್ಮ ಸಮುದಾಯಗಳಿಗೆ ಉದ್ದೇಶ ಪೂರ್ವಕವಾಗಿ ಮೋಸ ಮಾಡಲೆಂದೇ ಆದೇಶಗಳನ್ನು ಹೊರಡಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಬಲಾಢ್ಯ ಬಲಗೈ ಹಾಗೂ ಸ್ಪಶ್ಯ ಸಮುದಾಯದ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಮಾದಿಗ ಸಮುದಾಯವನ್ನು ವಂಚಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಬಸವವೃತ್ತದಿಂದ ಬಸ್ ನಿಲ್ದಾಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಸಿಎಂಗೆ ಮನವಿ ಪತ್ರವನ್ನು ತಹಸೀಲ್ದಾರ್ ಅಶೋಕ ಪವಾರ್‌ಗೆ ಸಲ್ಲಿಸಲಾಯಿತು.
ಮಾದಿಗ ಸಮಾಜದ ಮುಖಂಡರಾದ ದೇವಪುತ್ರಪ್ಪ ಚಿಟ್ಟಿ, ಜಯಪ್ಪ ಗುತ್ತೇದಾರ್, ಹುಲಿಗೆಪ್ಪ ಕರಿಬಿಲ್ಕರ್, ಮೈಕಲ್, ಸವಾರೆಪ್ಪ, ಮಲ್ಲಪ್ಪ ದೊಡ್ಮನಿ, ಎಂ.ಮಲ್ಲಪ್ಪ, ರಾಜಪ್ಪ ಸಿರವಾರ, ಎಲ್.ವಿ.ಸುರೇಶ, ಡಿ.ಜಯಪ್ಪ ಕೆಂಪು, ಜಯರಾಜ ಜಡಿಮಳೆ, ಶಾಂತಪ್ಪ ಪಿತಗಲ್, ಡೇವಿಡ್, ಡಿ.ಎಚ್. ಭೀಮಣ್ಣ, ಚನ್ನಪ್ಪ ಬೂದಿನಾಳ, ದಾನಪ್ಪ, ಲಕ್ಷ್ಮಣ, ಮಲ್ಲಪ್ಪ ದೊಡ್ಮನೆ ನವಲಕಲ್, ಅಂಬಣ್ಣ, ರಾಮು ಗಿಂಡಿ, ಹನುಮೇಶ ಭೇರಿ ಇತರರಿದ್ದರು.