ಕಪ್ಪರದ ಅಯ್ಯಪ್ಪ ತಾತನ ಮೂರ್ತಿ, ಬೆಳ್ಳಿ ರಥ 
ರಾಯಚೂರು

ಹೊರಪೇಟೆ ಮಠದ ಬೆಳ್ಳಿ ರಥೋತ್ಸವ ಇಂದು

ಪ್ರಮುಖ ಮುಖ್ಯಾಂಶಗಳು

  • ಹೊರಪೇಟೆ ಮಠ

ಹೊರಪೇಟೆ ಮಠದ ಬೆಳ್ಳಿ ರಥೋತ್ಸವ ಇಂದು

ಗುರುಗುಂಟಾ: ಸ್ಥಳೀಯ ಹೊರಪೇಟೆ ಮಠದಲ್ಲಿ ಫೆ.16ರಂದು ಏಳನೇ ವರ್ಷದ ಬೆಳ್ಳಿ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ಮಠದ ಮುಖ್ಯಸ್ಥ ಚನ್ನಯ್ಯಸ್ವಾಮಿ ಹೊರಪೇಟೆ ಮಠ ತಿಳಿಸಿದರು.
ಭಾನುವಾರ ಉಪವಾಸದೊಂದಿಗೆ ವಿವಿಧ ಭಜನಾ ಮಂಡಳಿಗಳಿಂದ ಜಾಗರಣೆ ನೆರವೇರಿತು. ಸೋಮವಾರ ಬೆಳಗ್ಗೆ ವಿಶೇಷ ಪೂಜೆ, ಕಪ್ಪರದ ಅಯ್ಯಪ್ಪ ತಾತ ಅವರ ಗದ್ದುಗೆಗೆ ರುದ್ರಾಭಿಷೇಕ, ಕುಂಭ, ಕಳಸ ಹಾಗೂ ಜನಪದ ವಾದ್ಯ ಮೇಳದೊಂದಿಗೆ ಕಪ್ಪರದ ಅಯ್ಯಪ್ಪ ತಾತನ ಮೂರ್ತಿಯನ್ನು ಮಡಿಕಾರ್ ಪೇಟೆಯ ಗದ್ದೆಮ್ಮ ದೇಗುಲದಿಂದ ಮೆರವಣಿಗೆ ನಡೆಸಿ ನಂತರ ರಥದಲ್ಲಿ ಪ್ರತಿಷ್ಠಾಪಿಸಿ ಸಂಜೆ 21 ಕೆಜಿ ತೂಕದ ಬೆಳ್ಳಿ ಲೇಪಿತ ರಥೋತ್ಸವ ನೆರವೇರಲಿದೆ. ನಂತರ ಧರ್ಮಸಭೆ ಜರುಗಲಿದೆ.