ಲಿಂಗಸುಗೂರು ಸಮೀಪದ ಯರಡೋಣ ಕ್ರಾಸ್‌ನಲ್ಲಿರುವ ಸಿದ್ಧರಾಮೇಶ್ವರ ಗುರುಮಠದಿಂದ ಶ್ರೀ ಮುರುಘೇಂದ್ರ ಶಿವಯೋಗಿಗಳು ಅಮರೇಶ್ವರ ಸುಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡರು. ಪ್ರಮುಖರಾದ ಬಸವರಾಜ ಬುದ್ದಿನ್ನಿ, ಶರಣಬಸವ ಗಣಾಚಾರಿ, ಶ್ರೀಶೈಲಪ್ಪ ಹೊನ್ನಳ್ಳಿ, ವಿರೂಪಾಕ್ಷಯ್ಯ ಹಿರೇಮಠ, ವೆಂಕನಗೌಡ ಗುಡದನಾಳ ಇತರರಿದ್ದರು.
- ಶ್ರೀ ಮುರುಘೇಂದ್ರ ಶಿವಯೋಗಿಗಳ ನೇತೃತ್ವ
- ಲಿಂಗಸುಗೂರು ಯರಡೋಣ ಕ್ರಾಸ್ ಪಾದಯಾತ್ರೆ
ಲಿಂಗಸುಗೂರು: ಯರಡೋಣ ಕ್ರಾಸ್‌ನಲ್ಲಿರುವ ಶ್ರೀ ಸಿದ್ಧರಾಮೇಶ್ವರ ಗುರುಮಠದಿಂದ ಶ್ರೀ ಅಮರೇಶ್ವರ ಸುಕ್ಷೇತ್ರಕ್ಕೆ ಶ್ರೀ ಮುರುಘೇಂದ್ರ ಶಿವಯೋಗಿಗಳ ನೇತೃತ್ವದಲ್ಲಿ ಸಾವಿರಾರು ಭಕ್ತರು 17ನೇ ವರ್ಷದ ಪಾದಯಾತ್ರೆಯನ್ನು ಕೈಗೊಂಡರು.
ಭಜನೆ, ವಾದ್ಯಮೇಳದೊಂದಿಗೆ ‘ಗುರುವಿನ ನಡಿಗೆ ಶಿವನೆಡೆಗೆ’ ಪಾದಯಾತ್ರೆ ಅಮರೇಶ್ವರ ಕ್ರಾಸ್, ದೇವರಭೂಪೂರು ಮೂಲಕ ಶ್ರೀ ಅಮರೇಶ್ವರ ದೇವಸ್ಥಾನ ತಲುಪಿತು. ಪ್ರಮುಖರಾದ ಬಸವರಾಜ ಬುದ್ದಿನ್ನಿ, ಶರಣಬಸವ ಗಣಾಚಾರಿ, ಶ್ರೀಶೈಲಪ್ಪ ಹೊನ್ನಳ್ಳಿ, ವಿರೂಪಾಕ್ಷಯ್ಯ ಹಿರೇಮಠ, ವೆಂಕನಗೌಡ ಗುಡದನಾಳ, ಈಶಪ್ಪ ಹೊನ್ನಳ್ಳಿ, ಗುಂಡಪ್ಪ ಮೇದಿನಾಪೂರ, ಹನುಮಯ್ಯ ಲಿಂಗಸುಗೂರು, ರಮೇಶ, ಮಹಾಂತೇಶ ಗುಡಗುಂಟಿ, ಚಂದ್ರಶೇಖರ ಹಟ್ಟಿ ಪಾಲ್ಗೊಂಡಿದ್ದರು.