ರಾಯಚೂರಿನ ಎಸ್‌ಎಲ್‌ವಿ ಸಭಾಂಗಣದಲ್ಲಿ ಭಾನುವಾರ ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ವತಿಯಿಂದ ಹಮ್ಮಿಕೊಂಡ 371 (ಜೆ) ಹೋರಾಟಗಾರರ ಸಮಾವೇಶ ಮತ್ತು ದುಂಡು ಮೇಜಿನ ಸಭೆಯನ್ನು ಹಿರಿಯ ಹೋರಾಟಗಾರ ಆರ್.ಕೆ ಹುಡುಗಿ ಉದ್ಘಾಟಿಸಿದರು. ಹಿರಿಯ ಹೋರಾಟಗಾರ ಆರ್.ಕೆ ಹುಡುಗಿ, ಹೈದ್ರಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ, ಬಸವನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಕೆ. ನೀಲಾ, ರಜಾಕ್ ಉಸ್ತಾದ್, ಭಾರದ್ವಾಜ್ ಇದ್ದರು.
- ಶಿಕ್ಷಣದ ವ್ಯವಸ್ಥೆಯನ್ನು ಹಾಳು ಮಾಡದರೆ ದೇಶವೇ ನಾಶ
ರಾಯಚೂರು
ಒಂದು ದೇಶವನ್ನು ನಾಶ ಮಾಡಲು ಆ ದೇಶದ ಮೇಲೆ ಬಾಂಬ್, ದಾಳಿ, ಹಾಕದೇ ನಿರ್ನಾಮ ಮಾಡಲು ದೇಶದ ಶಿಕ್ಷಣದ ವ್ಯವಸ್ಥೆಯನ್ನು ಹಾಳು ಮಾಡದರೆ ದೇಶವೇ ನಾಶವಾಗುತ್ತದೆ ಎಂದು ಆದರೆ ಅಂತಹ ಪೋಸ್ಟರ್ ಇದೀಗ ನಮ್ಮ ಭಾಗದಲ್ಲಿ ಹಾಕಬೇಕಾಗಿದೆಂದು ಹಿರಿಯ ಹೋರಾಟಗಾರ ಆರ್.ಕೆ ಹುಡುಗಿ ಹೇಳಿದರು.
ನಗರದ ಎಸ್‌ಎಲ್‌ವಿ ಸಭಾಂಗಣದಲ್ಲಿ ಭಾನುವಾರ ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ವತಿಯಿಂದ ಹಮ್ಮಿಕೊಂಡ 371 (ಜೆ) ಹೋರಾಟಗಾರರ ಸಮಾವೇಶ ಮತ್ತು ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿ ಮಾತನಾ ಡಿದರು,
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವನ್ನಾಗಿ ಬದಲಾಯಿಸಿದ ಸರ್ಕಾರ ಈ ಭಾಗದ ಶಿಕ್ಷಣದ ವ್ಯವಸ್ಥೆಯನ್ನು ಬದಲಾಯಿಸದೇ ತೀರಾ ಹದಗೆಟ್ಟಿದ್ದು, ಮನುಷ್ಯತ್ವದ ಬರಗಾಲದಲ್ಲಿ ನಾವು ಬದುಕುತ್ತಿದ್ದೇವೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಶಿಕ್ಷಣದ ವ್ಯವಸ್ಥೆ ಬದಲಾವಣೆಯಾಗಿಲ್ಲ, ಅತ್ಯಂತ ತೀರಾ ಹದಗೆಟ್ಟಿದೆ. ಈ ಭಾಗವು ಬರಗಾಲವಾಗಿದೆ. ಅದು ಮುನಷ್ಯತ್ವದ ಬರಗಾಲ ಇದರಲ್ಲಿ ನಾವು ಬದುಕುತ್ತಿದ್ದೇವೆ ಎಂದು ಅಳಲು ತೋಡಿ ಕೊಂಡರು.
ಪ್ರಾಸ್ತಾವಿಕವಾಗಿ ಹೈದ್ರಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಅನುಷ್ಠಾನಗೊಂಡು 12 ವರ್ಷಗಳ ಬಳಿಕ ಅಭಿವೃದ್ಧಿ ಎಷ್ಟಾಗಿದೆ ಎಂದು ಹಿಂದೆ ನೋಡಿದಾಗ ಆಘಾತಕಾರಿಯಾಗಿದೆ. ನಂಜುಂಡಪ್ಪ ವರದಿಯಲ್ಲಿನ ಅಂಶಗಳು ಹೋಲಿಸಿದರೆ ಅದಕ್ಕೂ ಮುಗಿಲಾಗಿ ತೀರಾ ಪಾತಾಳಕ್ಕೆ ಕುಸಿದಿರುವುದು ಆತಂಕಕಾರಿಯಾಗಿದೆ.
ಗೋವಿಂದರಾಜ್ ವರದಿಯು ಕಲ್ಯಾಣ ಕರ್ನಾಟಕದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿವು ತೀರಾ ಕಡಿಮೆಯಾಗಿದೆ. ಈ ಭಾಗದಲ್ಲಿ 30 ಸಾವಿರ ಶಿಕ್ಷಕರು ಹುದ್ದೆಗಳು ಖಾಲಿ ಇವೆ, 10 ಸಾವಿರಕ್ಕೂ ಅಧಿಕ ಇಂಗ್ಲಿಷ್ ಮತ್ತು ಗಣಿತ ವಿಷಯಗಳ ಶಿಕ್ಷಕರೇ ನೇಮಕವಾಗಿಲ್ಲ. ಸರ್ಕಾರವೇ ಮಕ್ಕಳಿಗೆ ಪಾಸ್ ಮಾಡುತ್ತಿವೆ ಪಾಸಾದ ಮಕ್ಕಳು ಪಿಯುಸಿ ಶಿಕ್ಷಣ ಪಡೆಯುತ್ತಿದ್ದು ಅವರಿಗೆ 2ನೇ ತರಗತಿ ಪಾಠ ಓದಲು ಬರೆಯಲು ಬರುತ್ತಿಲ್ಲ, ಈ ಭಾಗದ ಮಾನವ ಅಭಿವೃದ್ಧಿ ಸೂಚಾಂಕ ಹಿನ್ನಡೆಯಾಗಿದೆ ಎಂದರು.
371(ಜೆ) ಅನುಷ್ಠಾನಗೊಂಡು 12 ವರ್ಷಗಳಾಗಿದ್ದರೂ ನಮ್ಮ ಭಾಗದ ಜನಪ್ರತಿನಿಧಿಗಳಿಗೆ 371 (ಜೆ) ಬಗ್ಗೆ ಸರಿಯಾಗಿ ಮಾಹಿತಿಯೇ ಗೊತ್ತಿಲ್ಲ, ಪ್ರತಿ ವರ್ಷ ಭಾಗದ ಅಭಿವೃದ್ಧಿಗೆ 5 ಸಾವಿರ ಕೋಟಿ ಅನುದಾನ ನೀಡುತ್ತಿದ್ದು ಕೇವಲ 800 ಕೋಟಿಯಷ್ಟು ಕ್ರಿಯಾ ಯೋಜನೆ ಸಲ್ಲಿಸಲು ಹಿನ್ನಡೆಯಾಗಿದೆ. ಈ ಭಾಗದ 50 ತಾಲೂಕುಗಳಲ್ಲಿ 40 ತಾಲೂಕುಗಳು ತೀರಾ ಹಿಂದುಳಿದ ತಾಲೂಕುಗಳಾಗಿವೆ, 2022-23ನೇ ಸಾಲಿನಲ್ಲಿ ಸಿಐಜಿ ವರದಿ ನೀಡಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವಿಫಲವಾಗಿದೆ, 7 ಸಾವಿರ ಕೋಟಿ ಅನುದಾನ ಬಳಕೆಯಲ್ಲಿ ಭ್ರಷ್ಟಾಚಾರ, ದುರ್ಬಳಕೆ, ಅವ್ಯವಹಾರವಾಗಿದೆ ಎಂದು ವರದಿಯಲ್ಲಿ ಹೇಳಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಸವಾಲುಗಳು ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿ ಈ. ಧನರಾಜ್ ವಿಷಯ ಮಂಡಿಸಿ ಮಾತನಾಡಿದರು, 371(ಜೆ) ಅನುಷ್ಠಾನಗೊಂಡು 12 ವರ್ಷಗಳಾಗಿವೆ. ಪ್ರಸ್ತುತ ದಿನಗಳು ಎಐ ತಂತ್ರಜ್ಞಾನದ ಕಡೆಗೆ ಹೊರಟಿದ್ದರೆ ಕಲ್ಯಾಣ ಕರ್ನಾಟಕದ ಭಾಗದ ಶಿಕ್ಷಣದ ವ್ಯವಸ್ಥೆ ವಿನಾಶದ ಕಡೆಗೆ ಕುಸಿಯುತ್ತಿರುವುದು ಆಘಾತವನ್ನುಂಟು ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದ ಸಾಕ್ಷರತೆ ಪ್ರಮಾಣವು ಬಿಹಾರಕ್ಕೆ ಹೋಲಿಸದೆ ಅತ್ಯಂತ ತೀರಾ ಕಲ್ಯಾಣ ಕರ್ನಾಟಕ ಪ್ರದೇಶವಾಗಿದೆ ಎಂದರು.
ಸರ್ಕಾರ ಶಾಲೆಗಳ ಉಳಿವಿಗಾಗಿ ಹೋರಾಟ ನಡೆಯುತ್ತಿದ್ದು ಅದಕ್ಕೆ ನಾವೆಲ್ಲಾ ಬೆಂಬಲಿಸಬೇಕಾಗಿದೆ, ಈ ಭಾಗವು ಶೇ 40 ರಷ್ಟು ಕೃಷಿ ಕಾರ್ಮಿಕರು, ಶೇ 22 ರಷ್ಟು ಪ.ಜಾತಿ, ಶೇ 12.76 ರಷ್ಟು ಪ.ಪಂಗಡ, ಶೇ 15.44 ರಷ್ಟು ಅಲ್ಪಸಂಖ್ಯಾತರು, ಶೇ.,27.3 ರಷ್ಟು ಹಿಂದುಳಿದ ಪ್ರದೇಶದ ಜನರಿದ್ದಾರೆ. ಎಲ್ಲಾ ವರ್ಗದ ಜನರು ಅಭಿವೃದ್ಧಿಯಾಗಿಕಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ, ಬಸವನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಕೆ. ನೀಲಾ, ರಜಾಕ್ ಉಸ್ತಾದ್, ಭಾರದ್ವಾಜ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಹೋರಾಟಗಾರರು ಮುಖಂಡರು ಭಾಗವಹಿಸಿದ್ದರು.