ರಾಯಚೂರಿನ ಹೊರವಲಯದಲ್ಲಿ ನಿರ್ಮಾಣ ಮಾಡಿದ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಹೊರ ನೋಟ. 
ರಾಯಚೂರು

ಏ.01 ರಿಂದ ಹೈಟೆಕ್ ಟ್ರ್ಯಾಕ್ ಪ್ರಾರಂಭ!

ಪ್ರಮುಖ ಮುಖ್ಯಾಂಶಗಳು

  • ಆರ್‌ಟಿಓ ಅಧಿಕಾರಿಗಳಿಂದ ಉದ್ಘಾಟನೆ
  • ಸ್ವಯಂಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥ
  • 8 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಪಥಗಳನ್ನು ನಿರ್ಮಾಣ
ರಾಯಚೂರು ನೈಪುಣ್ಯತೆ ಇರುವ ಚಾಲಕರಿಗಷ್ಟೆೇ ವಾಹನ ಚಾಲನಾ ಪರವಾನಗಿಯನ್ನು ಹಸ್ತಕ್ಷೇಪ ಇಲ್ಲದೇ ಪಕ್ಷತೆ ಹೊಂದಿದವರಿಗೆ ಮಾತ್ರ ನೀಡುವ ಸಲುವಾಗಿ ನಗರದಲ್ಲಿ ನಿರ್ಮಾಣವಾಗಿರುವ ಸ್ವಯಂಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥಕ್ಕೆ ಆರ್‌ಟಿಓ ಈರಣ್ಣ ಅವರಿಂದ ಬುಧವಾರ ಚಾಲನೆ ದೊರೆತ್ತಿದ್ದು, ಏ.01 ರಿಂದ ಅಧಿಕೃತ ಪ್ರಾರಂಭವಾಗಲಿದೆ.
ನಗರದ ಸಿದ್ದರಾಂಪುರ ಗ್ರಾಮದ ಮಾರ್ಗದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ (ಹೈಟೆಕ್ ಟ್ರ್ಯಾಕ್)ವನ್ನು ಸುಮಾರು 8 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಪಥಗಳನ್ನು ನಿರ್ಮಾಣ ಮಾಡಲಾಗಿದ್ದು, ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಲಬುರಗಿ ನಂತರ ರಾಯಚೂರಿನಲ್ಲಿ ಅತ್ಯಾಧುನಿಕ ಪಥ ನಿರ್ಮಾಣ ಮಾಡುತ್ತಿರುವುದು ವಿಶೇಷ.
ವಾಹನ ಚಲಿಸುವ ಪರೀಕ್ಷಾ ಪಥದುದ್ದಕ್ಕೂ ಸೆನ್ಸರ್‌ಗಳನ್ನು ಅಳವಡಿಸಲಾಗುತ್ತದೆ. ವಾಹನ ಓಡಿಸುವವರು ಸ್ವಲ್ಪ ಯಾಮಾರಿದರೆ ಅಥವಾ ನಿಯಮ ಉಲ್ಲಂಘನೆ ಮಾಡಿದ್ದನ್ನು ಈ ಸೆನ್ಸರ್‌ಗಳು ಗುರುತಿಸುತ್ತವೆ. ವಾಹನ ಪಥದಿಂದ ಹೊರಗೆ ಚಲಿಸಿದರೆ, ಪರವಾನಗಿ ನೀಡುವುದಕ್ಕೆ ನಿರಾಕರಿಸಲಾಗುತ್ತದೆ.
ವಾಹನ ಚಾಲನೆ ಮಾಡುವುದು ಗಣಕೀಕರಣ ಮತ್ತು ಸಿಸಿಟಿವಿ ಕ್ಯಾಮೆರಾದಲ್ಲಿ ದಶ್ಯಾವಳಿ ಸೆರೆ ಹಿಡಿಯುವ ವ್ಯವಸ್ಥೆ ಅಳವಡಿಸಲಾಗುತ್ತದೆ. ವಾಹನ ಓಡಿಸುವುದಕ್ಕೆ ಪಕ್ಕಾ ಕಲಿತುಕೊಂಡರಷ್ಟೆ ಎಲ್‌ಎಲ್‌ಆರ್ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.ಸದ್ಯದ ವ್ಯವಸ್ಥೆಯಲ್ಲಿ ಪ್ರಾದೇಶಿಕ ಸಾರಿಗೆ ಇನ್‌ಸ್ಪೆಕ್ಟರ್ ಎದುರು ವಾಹನ ಓಡಿಸಿ ತೋರಿಸಬೇಕು.
ಇನ್‌ಸ್ಪೆಕ್ಟರ್ ಎದುರು ನಡೆಯುವ ಪರೀಕ್ಷೆಯಲ್ಲಿ ಅನುಮೋದನೆಯಾದರೆ, ಪರವಾನಗಿ ಸಿಗುತ್ತಿತ್ತು. ಆದರೆ ಪರೀಕ್ಷ ಪಥ ನಿರ್ಮಾಣವಾದರೆ ಅಕಾರಿಗಳು ತಮ್ಮ ಇಷ್ಟದಂತೆ ಪರವಾನಗಿ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ.ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಅನುಕೂಲವಾಗಲಿದೆ.
ರಾಯಚೂರಿನಲ್ಲಿ ನಿರ್ಮಾಣವಾಗಿರುವ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಕಾಮಗಾರಿಯು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಸೆನ್ಸರ್‌ಗಳು ಅಳವಡಿಕೆ ಮಾಡಿ ಮಾ.25 ರಂದು ಉದ್ಘಾಟನೆ ಮಾಡಲಾಗಿದ್ದು, ಏಪ್ರಿಲ್ 01 ರಿಂದ ಅಧಿಕೃತವಾಗಿ ಕಾರ್ಯ ನಿರ್ವಹಣೆ ಮಾಡಲಾಗುತ್ತದೆ. ಇದರಿಂದ ಅಧಿಕಾರಿಗಳಿಗೆ ಕೆಲಸದ ಒತ್ತಾಡ ಕಡಿಮೆಯಾಗಲಿದೆ.
ಈರಣ್ಣ ಆರ್‌ಟಿಓ ರಾಯಚೂರು