ಮಸ್ಕಿ ಹೈಟೆಕ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ರಿಪೇರಿ ಮತ್ತು ಮೆಂಟೇನನ್ಸ್ ಅಸಿಸ್ಟೆಂಟ್ ಸ್ಮಾರ್ಟ್ ಪೋನ್ಸ್ ತರಬೇತಿ ಕಾರ್ಯಕ್ರಮದಲ್ಲಿ ನಯೋಪ್ರಾ ಅಧ್ಯಕ್ಷ ಆರ್.ಸಿದ್ದನಗೌಡ ತುರ್ವಿಹಾಳ ಮಾತನಾಡಿದರು. ಭಾಜಪ ಎಸ್ಟಿ ಘಟಕದ ಜಿಲ್ಲಾ ಉಪಾಧ್ಯಕ್ಷ ಮೌನೇಶ ನಾಯಕ, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ಪುರಸಭೆ ಸದಸ್ಯ ಮಲ್ಲಯ್ಯ ಇತರರಿದ್ದರು.
- ಕೌಶಲ ಕರಗತ
- ಸ್ವಂತ ವ್ಯವಹಾರ
- ಕೌಶಲಾಭಿವೃದ್ಧಿ
- ಮೆಂಟೇನೆನ್ಸ್ ಅಸಿಸ್ಟೆಂಟ್ ಸ್ಮಾರ್ಟ್ ಪೋನ್ಸ್
ಸ್ವಂತ ವ್ಯವಹಾರ ನಡೆಸಲು ಸಹಕಾರಿ
ಮಸ್ಕಿ: ತರಬೇತಿ ಪಡೆಯುತ್ತಿರುವ ಅಭ್ಯಾರ್ಥಿಗಳು ಆಸಕ್ತಿಯಿಂದ ಕಲಿತು ಕೌಶಲ ಕರಗತ ಮಾಡಿಕೊಂಡರೆ ಸ್ವಂತ ವ್ಯವಹಾರ ನಡೆಸಲು ಸಹಕಾರಿಯಾಗುತ್ತದೆ ಎಂದು ನಯೋಪ್ರಾ ಅಧ್ಯಕ್ಷ ಆರ್.ಸಿದ್ದನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಹೈಟೆಕ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮ ಶೀಲತಾ ಹಾಗೂ ಬುಡಕಟ್ಟು ವ್ಯವಹಾರಗಳ ಸಹಯೋಗದಲ್ಲಿ ರಿಪೇರಿ ಮತ್ತು ಮೆಂಟೇನೆನ್ಸ್ ಅಸಿಸ್ಟೆಂಟ್ ಸ್ಮಾರ್ಟ್ ಪೋನ್ಸ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಯಚೂರು ಜೆಎಸ್‌ಎಸ್ ಮತ್ತು ಟಿಎಸ್‌ಪಿ ನಿರ್ದೇಶಕ ಸದಾನಂದ ಎಂ.ಪೂಜಾರಿ ಮಾತನಾಡಿ, ಅಭ್ಯಾರ್ಥಿಗಳು ತರಬೇತಿ ಪಡೆದರೆ ಸಾಲದು ಕಲಿತ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ನಿರ್ವಹಣೆಗೆ ಮುಂದಾಗಿ ಎಂದರು.
ಭಾಜಪ ಎಸ್ಟಿ ಘಟಕದ ಜಿಲ್ಲಾ ಉಪಾಧ್ಯಕ್ಷ ಮೌನೇಶ ನಾಯಕ, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ಪುರಸಭೆ ಸದಸ್ಯ ಮಲ್ಲಯ್ಯ, ಪ್ರಾಕೃಪಸ ಸಂಘದ ಅಧ್ಯಕ್ಷ ನಾಗಭೂಷಣ ಬಾರಕೇರ, ಪ್ರಮುಖರಾದ ಪಂಪಾಪತಿ ಹೊಸಪೇಟೆ, ಯಮನೂರು ಕನ್ನಾರಿ ಇತರರಿದ್ದರು.