ಮಲ್ಲೆದೇವರಗುಡ್ಡದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಸಹಿಪ್ರಾ ಶಾಲೆ ಮುಖ್ಯಶಿಕ್ಷಕಿ ಮಂಜುಳಾ ಉದ್ಘಾಟಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ ನಾಯಕ ದೊರೆ, ಕಾರ್ಯಕ್ರಮ ನಿರ್ವಾಹಕಿ ಮಲ್ಲಿಕಾ, ಸ್ತ್ರೀರೋಗ ತಜ್ಞ ಡಾ.ಸೈಯದ್ ಇತರರಿದ್ದರು. 
ರಾಯಚೂರು

ಆರೋಗ್ಯ ಶಿಬಿರ ಬಡವರಿಗೆ ಉಪಯುಕ್ತ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ ನಾಯಕ ದೊರೆ ಹೇಳಿಕೆ
  • ಅರಕೇರಾ ಮಲ್ಲೆದೇವರಗುಡ್ಡ ಆರೋಗ್ಯ ತಪಾಸಣೆ ಶಿಬಿರ
ಅರಕೇರಾ: ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಉಚಿತ ಶಿಬಿರವು ಉಪಯುಕ್ತವಾಗಿದೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ ನಾಯಕ ದೊರೆ ಹೇಳಿದರು.
ತಾಲೂಕಿನ ಮಲ್ಲೆದೇವರಗುಡ್ಡ ಗ್ರಾಮದಲ್ಲಿ ಜಿಪಂ ಹಾಗೂ ಆರೋಗ್ಯ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ, ಕಣ್ಣಿನ ಸಮಸ್ಯೆಗಳು ಸೇರಿ ಯಾವುದೇ ಕಾಯಿಲೆಯನ್ನು ಆರಂಭದಲ್ಲೇ ಪತ್ತೆಹಚ್ಚಲು ಆರೋಗ್ಯ ತಪಾಸಣೆ ಸಹಾಯಕವಾಗಿದೆ.
ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಗಂಭೀರತೆ ಕಡಿಮೆಯಾಗುತ್ತದೆ. ತಜ್ಞ ವೈದ್ಯರಿಂದ ನೇರ ಸಲಹೆ ಪಡೆಯುವ ಅವಕಾಶ, ಸರಿಯಾದ ಔಷಧ ಮತ್ತು ಜೀವನಶೈಲಿ ಬಗ್ಗೆ ಮಾರ್ಗದರ್ಶನ, ಪೌಷ್ಟಿಕ ಆಹಾರ, ಸ್ವಚ್ಛತೆ, ವ್ಯಾಯಾಮ, ಲಸಿಕೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡುತ್ತದೆ. ತಂಬಾಕು, ಮದ್ಯಪಾನದಿಂದ ಉಂಟಾಗುವ ಅಪಾಯಗಳ ಬಗ್ಗೆ ಅರಿವು ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳ ವೆಚ್ಚದಿಂದ ಮುಕ್ತವಾಗಲು ನೆರವಾಗುತ್ತದೆ ಎಂದರು.
ದಂತ ವೈದ್ಯ ನವನೀತ್, ಸಿಬ್ಬಂದಿ ಮುತ್ತಣ್ಣ, ಶಕುಂತಲಾ, ಸುನೀಲ್, ರೇಣುಕಾ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.