- ರಾಯರ 355ನೇ ಆರಾಧನಾ ಮಹೋತ್ಸವ
- - ರಾಜ್ಯದ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥನೆ
ರಾಜ್ಯದ ಜನತೆಗೆ ಯಾವುದೇ ತರಹದ ಸಂಕಷ್ಟಗಳು ಬಾರದೆ ಉತ್ತಮ ಮಳೆ-ಬೆಳೆಯಾಗಿ ರೈತರು ಸಮೃದ್ಧಿಯಿಂದಿರಬೇಕು ಹಾಗೂ ರಾಜ್ಯವು ಸುಭಿಕ್ಷವಾಗಿರಬೇಕೆಂದು ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನೆ ಮಹೋತ್ಸವ ಅಂಗವಾಗಿ ಗುರುವಾರ ಮೊದಲ ದಿನವೇ ಪತ್ನಿ ಭವಾನಿ ರೇವಣ್ಣ ಜತೆಗೆ ರಾಯರ ಮೂಲ ಬೃಂದಾವನ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಗುರುವಾರ ಆರಂಭಗೊಂಡು ಒಟ್ಟು ಏಳು ದಿನಗಳ ಕಾಲ ವಿಧ್ಯುಕ್ತವಾಗಿ ದೊರೆತಿದೆ.
ಈ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ನಮ್ಮ ಕುಟುಂಬದಿಂದ ಭಾಗವಹಿಸಿ,"ರಾಜ್ಯದ ಜನತೆಗೆ ಒಳ್ಳೆಯದಾಗಬೇಕು. ಜನರಿಗೆ ಯಾವುದೇ ತರಹದ ಸಂಕಷ್ಟಗಳು ಬಾರದೆ ಉತ್ತಮ ಮಳೆ-ಬೆಳೆಯಾಗಿ ರೈತರು ಸಮೃದ್ಧಿಯಿಂದಿರಬೇಕು ಹಾಗೂ ರಾಜ್ಯವು ಸುಭಿಕ್ಷವಾಗಿರಬೇಕೆಂದು ರಾಯರಿಗೆ ವಿಶೇಷ ಪೂಜೆ ಸಲ್ಲಿಸುತ್ತೇವೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೂ ಮತ್ತು ರಾಯರ ಮಠಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಅದರಿಂದ ಕುಟುಂಬ ಸಮೇತ ಸ್ವಾಮಿಯ ದರ್ಶನ ಪಡೆದು ರಾಜ್ಯದ ಸಮೃದ್ಧಿಗಾಗಿ ಹಾಗೂ ನಮ್ಮ ಕುಟುಂಬದ ಎಲ್ಲರೂ ಚೆನ್ನಾಗಿರಬೇಕು, ಎಲ್ಲರಿಗೂ ಒಳ್ಳೆಯದಾಗಲೆಂದು ಪ್ರಾರ್ಥಿಸಲಾಗಿದೆ ಎಂದರು.