ಮುದಗಲ್‌ನಲ್ಲಿ ಹಜರತ್ ಸೈಯದ್ ಷಾ ರಹೆಮಾನ್ ದುಲೈ ಉರುಸು ಮಂಗಳವಾರ ಜರುಗಿತು. ಪ್ರಮುಖರಾದ ಹುಸೇನ್ ಬಾಷಾ, ರಹೆಮಾನ್ ದುಲಾ, ಮೋದಿನ್ ಸಾಬ್ ಇತರರಿದ್ದರು.
ಮುದಗಲ್: ಪಟ್ಟಣದ ಮಸ್ಕಿ ರಸ್ತೆಯಲ್ಲಿರುವ ಐತಿಹಾಸಿಕ ಹಜರತ್ ಸೈಯದ್ ಷಾ ರಹೆಮಾನ್ ದುಲೈ ಉರುಸ್ ಮಂಗಳವಾರ ಸಡಗರ ಸಂಭ್ರಮದಿಂದ ಜರಗಿತು.
ಬೆಳಗ್ಗೆ ಗಂಧದ ಮೆರವಣೆಗೆ ಪ್ರಮುಖ ಬೀದಿಗಲ್ಲಿ ಸಂಚರಿಸಿ ದರ್ಗಾ ಶರೀಫ್ ತಲುಪಿತು. ನಂತರ ಗಂಧದ ಕಾರ್ಯಕ್ರಮವನ್ನು ಸೈಯದ್ ಯಾಸೀನ್ ಖಾದ್ರಿ, ಸೈಯದ್ ಶಕೀಲ್ ಖಾದ್ರಿ ನಡೆಸಿಕೊಟ್ಟರು. ಫಾತೇಹಾ ಮೌಲಾನಾ ಹಸೀಬ್ ಖಾದ್ರಿ ನಡೆಸಿಕೊಟ್ಟರು. ಗಂಧದ ನಂತರ ದರ್ಗಾದಲ್ಲಿ ಅನ್ನ ಸಂತರ್ಪಣೆ ಜರುಗಿತು.
ಪ್ರಮುಖರಾದ ಮುತ್ತುವಲಿ ಮೋದಿನ್ ಸಾಬ್, ಅಲ್ಲಬಕ್ಷ, ಹುಸೇನ್ ಬಾಷಾ, ರಹೆಮಾನ್ ದುಲಾ, ಮೋದಿನ್ ಸಾಬ್ ಇತರರಿದ್ದರು.