ಮಾನ್ವಿಯಲ್ಲಿ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಏಜೆಂಟ್‌ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಎಂಎಲ್ಸಿ ಎನ್.ಎಸ್.ಬೋಸರಾಜು ಉದ್ಘಾಟಿಸಿದರು. ಸಂಸದ ಜಿ.ಕುಮಾರನಾಯಕ, ಶಾಸಕ ಹಂಪಯ್ಯ ನಾಯಕ, ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್.ಹೂಲಗೇರಿ ಇತರರಿದ್ದರು. 
ರಾಯಚೂರು

ಎಸ್‌ಐಆರ್ ಪ್ರಕ್ರಿಯೆ ಜವಾಬ್ದಾರಿಯಿಂದ ನಿಭಾಯಿಸಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಎಂಎಲ್ಸಿ ಎನ್.ಎಸ್.ಬೋಸರಾಜು ಸಲಹೆ
  • ಮಾನ್ವಿ ಕಾಂಗ್ರೆಸ್ ಬಿಎಲ್‌ಎಗಳಿಗೆ ತರಬೇತಿ ಕಾರ್ಯಗಾರ
ಮಾನ್ವಿ: ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾರರ ಪಟ್ಟಿ ಅಗತ್ಯವಾಗಿದ್ದು, ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಬಿಎಲ್‌ಎಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಎಂಎಲ್ಸಿ ಎನ್.ಎಸ್.ಬೋಸರಾಜು ಸಲಹೆ ನೀಡಿದರು.
ಖಾದ್ರಿ ಫಂಕ್ಷನ್ ಹಾಲ್‌ನಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜಿಪಂ, ತಾಪಂ ಹಾಗೂ ಬೂತ್ ಮಟ್ಟದ ಏಜೆಂಟ್‌ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಮತದಾರರ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಭರ್ತಿ ಮಾಡಲು ಸಾರ್ವಜನಿಕರಿಗೆ ಬಿಎಲ್‌ಎಗಳು ಸಹಕರಿಸಬೇಕು ಎಂದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಭಾಗವಹಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಆದ್ದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕಾರ್ಯಾಗಾರ ಹಮ್ಮಿಕೊಂಡಿದ್ದು, ಸದುಪಯೋಗ ಪಡೆದು ವಾರ್ಡ್‌ಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಶಾಸಕ ಹಂಪಯ್ಯ ನಾಯಕ ಮಾತನಾಡಿ, ಎಸ್‌ಐಆರ್ ಪರಿಷ್ಕರಣೆ ಕಾರ್ಯದಲ್ಲಿ ಪ್ರತಿಯೊಬ್ಬ ಬಿಎಲ್‌ಎ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಗುರುತಿಸಿ ಸರಿಪಡಿಸಲು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಹೇಳಿದರು.
ಸಂಸದ ಜಿ.ಕುಮಾರ ನಾಯಕ ಮಾತನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್.ಹೂಲಗೇರಿ, ಪ್ರಮುಖರಾದ ಕೆ. ಶಾಂತಪ್ಪ, ರಾಮಣ್ಣ ಇರಬಗೇರಾ, ಮೊಹ್ಮದ್ ಶಾಲಂ, ಸೂಗಪ್ಪ ಸಾಹುಕಾರ, ಜಯಣ್ಣ, ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಗಫೂರ್‌ಸಾಬ್, ಶಿವಾನಂದ ಚುಕ್ಕಿ, ಪ್ರಮುಖರಾದ ಶರಣಯ್ಯನಾಯಕ ಗುಡದಿನ್ನಿ, ಅಮರೇಗೌಡ ಹಂಚಿನಾಳ, ಶಿವಕುಮಾರ, ರೇಣುಕಾ ಸಿರವಾರ, ವಿಜಯಲಕ್ಷ್ಮೀ, ಕುರ್ಡಿ ಚಂದ್ರಶೇಖರ, ಜಯವಂತರಾವ್ ಪತಂಗೆ, ಕಿರಲಿಂಗಪ್ಪ, ಜಿ ಶಿವಮೂರ್ತಿ, ರುದ್ರಪ್ಪ ಅಂಗಡಿ, ಶಿವಣ್ಣ, ಸೈಯದ್ ಖಾಲಿದ್ ಗುರು, ರೌಡೂರು ಮಹಾಂತೇಶ ಸ್ವಾಮಿ, ಅಮರೇಶಪ್ಪ, ತಿಪ್ಪಣ್ಣ ಬಾಗಲವಾಡ ಇತರರಿದ್ದರು.