ಅರಕೇರಾ ತಾಲೂಕಿನ ಭೂಮನಗುಂಡ ಗ್ರಾಮದಲ್ಲಿ ಹಾಲುಗಂಬ ಉತ್ಸವ ಅದ್ದೂರಿಯಾಗಿ ಜರುಗಿತು.  
ರಾಯಚೂರು

ಭೂಮನಗುಂಡದಲ್ಲಿ ಹಾಲುಗಂಬ ಉತ್ಸವ ಅದ್ದೂರಿ

ನರೇಶ್ ಕುಮಾರ್
ಅರಕೇರಾ: ತಾಲೂಕಿನ ಭೂಮನಗುಂಡ ಗ್ರಾಮದಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಜಾತ್ರೆ ಅಂಗವಾಗಿ ಸೋಮವಾರ ಹಾಲುಗಂಬ ಉತ್ಸವ ಅದ್ದೂರಿಯಾಗಿ ಜರುಗಿತು. 
50 ಅಡಿ ಎತ್ತರದ ಹಾಲುಗಂಬಕ್ಕೆ ಲೋಳೆರಸ, ಜಾಜು ಲೇಪನ ಮಾಡಲಾಗಿತ್ತು. ಕಂಬದ ಮೇಲೆ ಕುಳಿತ ಪೂಜಾರಿ ಮೇಲಿಂದ ಹಾಲು, ಮಜ್ಜಿಗೆ ಬಿಟ್ಟರು. ಯುವಕರು ನಾ ಮುಂದು ತಾ ಮುಂದು ಎಂದು ಪೈಪೋಟಿ ಪ್ರದರ್ಶನ ಮಾಡಿದರು. 
ಕೊನೆಗೆ ಯುವಕ ಬಸವ ಕೊಂಡಲವರಯಲ್ಲಿ ಪ್ರಥಮ ಸ್ಥಾನ ಪಡೆದರು. ಇವರಿಗೆ ನಾಗರಾಜ ಎನ್ನುವವರು ಕಂಬ ಹತ್ತುವಾಗ ಸಾಥ್ ನೀಡಿದರು. 
ಪ್ರೇಕ್ಷಕರ ಶಿಳ್ಳೆ, ಕೇಕೆ, ಚಪ್ಪಾಳೆ ಸ್ಪರ್ಧಿಗಳನ್ನು ಹುರಿದುಂಬಿಸಿತು. ಒಬ್ಬರ ಮೇಲೊಬ್ಬರು ಹತ್ತುವಾಗ ಕೆಲವರು ಜಾರಿ ಬೀಳುತ್ತಿದ್ದ ದೃಶ್ಯ ರೋಮಾಂಚನ ಮೂಡಿಸಿತು.