ಮಾನ್ವಿ ತಹಿಸಲ್ ಕಚೇರಿಯಲ್ಲಿ ಬುಧವಾರ ತಾಲೂಕು ಆಡಳಿತದಿಂದ ನಿಜಶರಣ ಅಂಬಿಗಾರ ಚೌಡಯ್ಯ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ, ಪ್ರಮುಖರಾದ ನಾಗೇಶ ಕಬ್ಬೆರ, ಭೀಮರಾಯ ಸೀತಮನಿ ಇದ್ದರು.
ಮಾನ್ವಿ: ಹನ್ನೇರಡನೇ ಶತಮಾನದಲ್ಲಿ ಬಸವಣ್ಣ ನವರ ನೇತೃತ್ವದಲ್ಲಿ ನಡೆದ ವಚನ ಚಳುವಳಿಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ವಚನಗಳು ಕಂದಾಚಾರ, ಮೂಢನಂಬಿಕೆಗಳನ್ನು ಖಂಡಿಸಿದರು ಎಂದು ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಶರಣರು ನುಡಿದಂತೆ ನಡೆದರು, ಕಾಯಕ, ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದರು. ಅವರ ಆದರ್ಶಗಳು ನಾವೆಲ್ಲರು ಪಾಲಿಸಬೇಕು ಎಂದರು.
ಬಸವರಾಜ ಚೌಡ್ಲಿ ನಿಜಶರಣ ಅಂಬಿಗಾರ ಚೌಡಯ್ಯನವರ ಜೀವನ ಮತ್ತು ತತ್ವಾದರ್ಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ತಾಲೂಕು ಗಂಗಮತಸ್ಥರ ಸಮಾಜದ ಅಧ್ಯಕ್ಷ ವೆಂಕಟೇಶ ಸುಂಕೇಶ್ವರ, ಪ್ರಮುಖರಾದ ನಾಗೇಶ ಕಬ್ಬೆರ, ಭೀಮರಾಯ ಸೀತಮನಿ, ಮಂಜುನಾಥ ಮಾಡಗಿರಿ, ಬಸಪ್ಪ, ಮಹಾದೇವಪ್ಪ, ಕಾಶಿನಾಥ, ನಿವೃತ್ತ ಎ.ಎಸ್.ಐ. ಈರಪ್ಪ ಇತರರಿದ್ದರು.