ಚಾಮರಸ 
ರಾಯಚೂರು

ಬರ ಘೋಷಣೆಯಲ್ಲಿ ಸರ್ಕಾರ ತಾರತಮ್ಯ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಯೋಜನೆಗಳು
  • ಮಳೆಯಿಂದ
  • ನೀರಾವರಿ

ರಾಯಚೂರು: ಬರಗಾಲ ಘೋಷಣೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡಿದ್ದು ರೈತರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಕೂಡಲೇ ತಜ್ಞರ ತಂಡ ರಚಿಸಿ ತಾರತಮ್ಯ ಸರಿಪಡಿಸಬೇಕು. ಮಾನ್ವಿ, ಸಿರವಾರ, ರಾಯಚೂರು ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮಳೆಯಿಂದ, ನೀರಾವರಿ ಯೋಜನೆಗಳು ನೀರಿಲ್ಲದೆ ಮಾನ್ವಿ, ಸಿರವಾರ, ರಾಯಚೂರು ತಾಲೂಕಿನ ರೈತರು ಬೆಳೆ ಕಳೆದುಕೊಂಡಿದ್ದರೂ ಬರಗಾಲ ಘೋಷಣೆ ಮಾಡಿಲ್ಲ. ತುಂಗಭದ್ರಾ ಎಡದಂಡೆ ಕಾಲುವೆ ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದರೂ ಗೇಜ್ ನಿರ್ವಹಣೆಯಾಗುತ್ತಿಲ್ಲ. ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ತಡೆಯಲು ಕ್ರಮಕೈಗೊಳ್ಳಬೇಕು.
ಗಂಗಾವತಿ ಭಾಗದಲ್ಲಿ ಅಕ್ರಮ ನೀರಾವರಿ ತಡೆದರೂ ಮತ್ತೆ ನೀರು ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಬಲಭಾಗದಲ್ಲಿಯೂ ಅಕ್ರಮ ಕೆರೆಗಳನ್ನು ನಿರ್ಮಿಸಿದ್ದು ತೆರವುಗೊಳಿಸಬೇಕು. 69ಮೈಲ್‌ನಲ್ಲಿ ಎಸ್ಕೆಪ್ ಎತ್ತಿ ನೀರು ಪಡೆದಿದ್ದು ಇಂಜಿನಿಯರ್ ಮೇಲೂ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಬಳಗಾನೂರು ಪ್ರದೇಶದಲ್ಲಿ ಅನಧಿಕೃತವಾಗಿ ನೀರು ಹರಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮೂವರ ಕೊಲೆಯಾಗಿದೆ. ಪೊಲೀಸ್ ಇಲಾಖೆ ಕಾರ್ಯದಕ್ಷತೆಯನ್ನು ಬದಲಾಯಿಸಿಕೊಳ್ಳಬೇಕಿದೆ. ಈ ಹಿಂದೆ ಬಿಟ್ ವ್ಯವಸ್ಥೆಯಿದ್ದು ಗ್ರಾಮಗಳಲ್ಲಿ ಗಲಾಟೆ ಮಾಡುವವರ ಮೇಲೆ ಪೊಲೀಸರು ನಿಗಾವಹಿಸುತ್ತಿದ್ದರು. ಆದರೀಗ ಬೀಟ್ ವ್ಯವಸ್ಥೆಯೇ ಇಲ್ಲ. ಪೊಲೀಸರು ಗ್ರಾಮಸ್ಥರೊಂದಿಗೆ ಕುಂದುಕೊರತೆ ಸಭೆಗಳು ನಡೆಯುತ್ತಿಲ್ಲ. ಘಟನೆಗಳು ಆದಾಗ ಎಚ್ಚರವಹಿಸುವ ಬದಲು ಮುನ್ನಚ್ಚರಿಕೆ ವ್ಯವಸ್ಥೆ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಮುಖಂಡರಾದ ಬೂದಯ್ಯಸ್ವಾಮಿ, ದೇವರಾಜ ನಾಯಕ, ಮಲ್ಲಯ್ಯ ಚಂದ್ರಬಂಡಾ ಇದ್ದರು.