ಚಿಂಚರಕಿ ಗ್ರಾಪಂ ವ್ಯಾಪ್ತಿ ತೊಪ್ಪಲದೊಡ್ಡಿ ಗ್ರಾಮದಲ್ಲಿ ರೈತರು ತೊಗರಿ ಬಿತ್ತನೆ ಮಾಡುತ್ತಿರುವುದು.  
ರಾಯಚೂರು

ಉತ್ತಮ ಮಳೆ, ಬಿತ್ತನೆ ಕಾರ್ಯ ಆರಂಭ

ನರೇಶ್ ಕುಮಾರ್
ಕವಿತಾಳ: ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. 
ಪಟ್ಟಣದ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ರೈತರು ಈಗಾಗಲೇ ರೈತರು ಭೂಮಿ ಹದ ಮಾಡಿಕೊಂಡು ಕೃಷಿ ಚಟುವಟಿಗಳನ್ನು ಆರಂಭಿಸಿದ್ದಾರೆ.  ಹೀರಾ, ಚಿಂಚರಕಿ ಗ್ರಾಪಂ ವ್ಯಾಪ್ತಿಯಲ್ಲಿ ಕೆಂಪು ಭೂಮಿಯಿದ್ದು ತೊಗರಿ ಬಿತ್ತನೆ ಮಾಡುತ್ತಿದ್ದಾರೆ. ಕವಿತಾಳ, ವಟಗಲ್, ಅಮೀನಗಡ ಗ್ರಾಪಂ ವ್ಯಾಪ್ತಿಯಲ್ಲಿ ಕೆಂಪು ಭೂಮಿ ಮತ್ತು ಎರ‌್ರಿ ಭೂಮಿ ಬಹಳಷ್ಟಿದ್ದು ಹತ್ತಿ ಮತ್ತು ತೊಗರಿ ಬಿತ್ತನೆಮಾಡುತ್ತಿದ್ದಾರೆ.
ಮುಂಗಾರು ಹಂಗಾಮಿನ ರೋಹಿಣಿ ಮಳೆಯಲ್ಲಿ ಬಿತ್ತನೆ ಮಾಡಿದರೆ ಉತ್ತಮ ಬೆಳೆ ಬರುತ್ತದೆ ಎನ್ನುವುದು ರೈತರ ನಂಬಿಕೆಯಾಗಿದೆ. ಉಳ್ಳವರು ಟ್ರಾೃಕ್ಟರ್, ಯಂತ್ರಗಳನ್ನು ಬಳಸಿದರೆ, ಮಧ್ಯಮ ವರ್ಗದ ರೈತರು ಎತ್ತುಗಳಿಂದ ಬಿತ್ತನೆ ಮಾಡುತ್ತಿದ್ದಾರೆ.