ಸಿಂಧನೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಸ್ಕೌಟ್ಸ್ ಸ್ಕಾರ್ಫ್ ದಿನದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮಹಾಂತಪ್ಪ ಕೊಡಗಲಿ ಮಾತನಾಡಿದರು. 
ರಾಯಚೂರು

ಸ್ಕೌಟ್ಸ್-ಗೈಡ್ಸ್ ಉತ್ತಮ ಕಾರ್ಯನಿರ್ವಹಣೆ

ಅಶೋಕ್ ಕುಮಾರ್ ಎನ್

ಸಿಂಧನೂರು: ಸ್ಕೌಟ್ಸ್ ಸ್ಕಾರ್ಫ್ ಏಕತೆ, ಸೇವೆ, ನಾಯಕತ್ವ, ಸ್ನೇಹ ಬೆಳೆಸಲು ಸಹಕಾರಿಯಾಗಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಮಹಾಂತಪ್ಪ ಕೊಡಗಲಿ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಸ್ಕೌಟ್ಸ್ ಸ್ಕಾರ್ಫ್ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಸ್ಕೌಟ್ಸ್-ಗೈಡ್ಸ್ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಸಂಸ್ಥೆ ಸ್ಥಳೀಯ ಘಟಕದ ಕಾರ್ಯದರ್ಶಿ ಬೀರಪ್ಪ ಶಂಭೋಜಿ ಮಾತನಾಡಿ, ತಾಲೂಕಿನ ಖಾಸಗಿ ಕಾಲೇಜುಗಳಲ್ಲಿ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕಗಳನ್ನು ಆರಂಭಿಸುವ ಅವಶ್ಯವಿದೆ. ಯುವ ಶಕ್ತಿಯ ಸದುಪಯೋಗವಾಗಬೇಕಾದರೆ, ಎನ್‌ಸಿಸಿ, ಎನ್ನೆಸ್ಸೆಸ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕೆಂದರು.
ಸಹಾಯಕ ಪ್ರಾಧ್ಯಾಪಕ ಮುದುಕಪ್ಪ ಕುರಿ, ಸ್ಕೌಟ್ಸ್ ಮಾಸ್ಟರ್ ಸಿದ್ದಪ್ಪ ಬಸರಕೋಡ್, ಅಂಬಣ್ಣ ನಾಯುಕ, ಕೆ.ಯರಿಸ್ವಾಮಿ ಸಿರಗುಪ್ಪ, ಯುವ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸುಗಂದ, ಮಸ್ಕಿ ಯುವ ಸಮಿತಿ ಅಧ್ಯಕ್ಷೆ ಅನ್ನಪೂರ್ಣ, ರೋವರ್ಸ್‌ ಅಯ್ಯಪ್ಪ, ಸುರೇಶ, ಅಮರೇಗೌಡ, ಸಂಗೀತಾ ಇದ್ದರು.