ಮಾನ್ವಿಯಲ್ಲಿ ರಾಜ್ಯ ಅಲೆಮಾರಿ ಪರಿಶಿಷ್ಟ ಜಾತಿ ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರ್ ಕ್ಷೇಮಾಭಿವೃದ್ದಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಾಭಿಮಾನ ಸಮಾವೇಶವನ್ನು ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿದರು. ಶಾಸಕ ಹಂಪಯ್ಯನಾಯಕ, ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ, ಸಂಘದ ರಾಜ್ಯಾಧ್ಯಕ್ಷ ಡಾ.ವಿ.ಚಲಪತಿ, ಕಾರ್ಯದರ್ಶಿ ಮಹಾದೇವಪ್ಪ, ನಾಗಲಾಂಬಿಕೆ ಸಹಕಾರಿಯ ಅಧ್ಯಕ್ಷೆ ನಾಗರತ್ನಾ ಪಾಟೀಲ್ ಇತರರಿದ್ದರು.
- ಸಚಿವ ಎನ್.ಎಸ್.ಬೋಸರಾಜು ಹೇಳಿಕೆ
- ಮಾನ್ವಿಯಲ್ಲಿ ಸ್ವಾಭಿಮಾನ ಸಮಾವೇಶ
ಮಾನ್ವಿ: ರಾಜ್ಯ ಅಲೆಮಾರಿ ಪರಿಶಿಷ್ಟ ಜಾತಿ ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರ್ ಸಮುದಾಯಗಳ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಪಟ್ಟಣದಲ್ಲಿ ರಾಜ್ಯ ಅಲೆಮಾರಿ ಪರಿಶಿಷ್ಟ ಜಾತಿ ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರ್ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಾಭಿಮಾನ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅಯೋಗವು ನೀಡಿರುವ ವರದಿಯಂತೆ ಅಲೆಮಾರಿ ಸಮುದಾಯದವರಿಗೆ ಒಳ ಮೀಸಲಾತಿಯಲ್ಲಿ ಶೇ.1ರಷ್ಟು ವಿಶೇಷ ಸ್ಥಾನಮಾನ ಒದಗಿಸುವುದು, ಯಾವುದೇ ಅನ್ಯಾಯವಾಗದಂತೆ ಬೇಡಿಕೆಗಳ ಈಡೇರಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆಗಳು ನಡೆದಿದ್ದು, ಆದಷ್ಟು ಬೇಗ ಒಳ್ಳೆಯ ಸುದ್ದಿ ಕೊಡಲಾಗುವುದು ಎಂದು ತಿಳಿಸಿದರು.
ಶಾಸಕ ಹಂಪಯ್ಯನಾಯಕ ಮಾತನಾಡಿ, ಅಲೆಮಾರಿ ಸಮುದಾಯಗಳಿಗೆ ತೊಂದರೆಗಳಾಗದಂತೆ ಸಿಎಂ ಜತೆ ಚರ್ಚಿಸಿ ನ್ಯಾಯಕೊಡಿಸುವ ಕೆಲಸ ಮಾಡಲಾಗುವುದು. ಸಮುದಾಯದ ಮಕ್ಕಳು, ಯುವಕರು ಶಿಕ್ಷಣದ ಕಡೆ ಗಮನ ಹರಿಸಬೇಕು. ಸಮುದಾಯಗಳು ಸಂಘಟನೆಯಾದಾಗ ಮಾತ್ರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದರು.
ಕರ್ನಾಟಕ ಜಾನಪದ ವಿವಿ ಸಂಶೋಧನಾಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ ಉಪನ್ಯಾಸ ನೀಡಿದರು. ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ.ವಿ.ಚಲಪತಿ, ಕಾರ್ಯದರ್ಶಿ ಮಹಾದೇವಪ್ಪ, ಮಾಜಿ ಶಾಸಕರಾದ ರಾಜಾವೆಂಕಟಪ್ಪ ನಾಯಕ, ಗಂಗಾಧರನಾಯಕ, ನಾಗಲಾಂಬಿಕೆ ಸಹಕಾರಿಯ ಅಧ್ಯಕ್ಷೆ ನಾಗರತ್ನಾ ಪಾಟೀಲ್, ಪ್ರಮುಖರಾದ ಬಾಲಸ್ವಾಮಿ ಕೊಡ್ಲಿ, ರಾಜಾ ಸುಭಾಷಚಂದ್ರ ನಾಯಕ, ಯುವ ಘಟಕದ ರಾಜ್ಯಾಧ್ಯಕ್ಷ ಬಿ.ಉಮೇಶ ಯಾಪಲದಿನ್ನಿ, ಬುಡ್ಗ ಜಂಗಮ ರಾಜ್ಯ ಸಂಚಾಲಕ ಮಹಾಂತೇಶ್ ಸೀಕಲ್, ಬಿ.ನಾಗಪ್ಪ ಬಾಯಿದೊಡ್ಡಿ, ಎಸ್.ವೆಂಕೋಬ, ಯಲ್ಲಪ್ಪ, ಬಸವರಾಜ, ಪ್ರದೀಪ್, ರಮೇಶ, ರಾಮಕೃಷ್ಣ ಇದ್ದರು.