ನೀಟ್‌ನಲ್ಲಿ ಉತ್ತಮ ಅಂಕ ಪಡೆದ ಗೋನವಾರ ಗ್ರಾಮದ ಪಲ್ಲವಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ವಿದ್ಯಾರ್ಥಿನಿ ಪಾಲಕರಾದ ರಾಮಚಂದ್ರ, ಸುನೀತಾ ಇತರರಿದ್ದರು.
ಸಿಂಧನೂರು: ತಾಲೂಕಿನ ಗೋನವಾರ ಗ್ರಾಮದ ಪಲ್ಲವಿ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಗ್ರಾಮದ ರಾಮಚಂದ್ರ ಹಾಗೂ ಸುನೀತಾ ದಂಪತಿಯ ಪುತ್ರಿಯಾಗಿರುವ ಪಲ್ಲವಿ, ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 600ಕ್ಕೆ 588 ಉತ್ತಮ ಅಂಕ ಪಡೆದಿದ್ದರು. ಈಗ ನೀಟ್-2026 ಪರೀಕ್ಷೆಯಲ್ಲಿ 720ಕ್ಕೆ 613 ಅಂಕ ಗಳಿಸಿ ಆಲ್ ಇಂಡಿಯಾ ಜನರಲ್ ಮೆರಿಟ್‌ನಲ್ಲಿ 6,526ನೇ ರ‌್ಯಾಂಕ್ ಹಾಗೂ ಎಸ್ಸಿ ವಿಭಾಗದಲ್ಲಿ 159ನೇ ರ‌್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಗ್ರಾಮಸ್ಥರು ಅಭಿನಂದಿಸಿ ಸನ್ಮಾನಿಸಿದರು. ಪಲ್ಲವಿ ಅವರ ಸಾಧನೆ ಗ್ರಾಮದ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದ್ದು, ಶಿಕ್ಷಣದ ಮೂಲಕ ಗ್ರಾಮೀಣ ಮಕ್ಕಳೂ ಉನ್ನತ ಸಾಧನೆ ಮಾಡಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.