ರಾಯಚೂರಿನ ಪಶ್ಚಿಮ ಠಾಣೆಯ ಪೊಲೀಸರು ಆಂಧ್ರ ಪ್ರದೇಶದ ಗೋವಿಂದರಾಜುಲು ದೊಮ್ಮರ ಆರೋಪಿಯಿಂದ ವಶಪಡಿಸಿಕೊಂಡ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುವುದು. ಎಸ್ಪಿ ಅರುಣಾಂಗ್ಶು ಗಿರಿ, ಎಎಸ್ಪಿ ಹರೀಶ್, ಸಿಪಿಐ ಉಮೇಶ ಕಾಂಬ್ಳೆ, ಪಿಎಸ್‌ಐಗಳಾದ ಮಂಜುನಾಥ ಟಿಡಿ, ಲಕ್ಷ್ಮೀದೇವಿ ಇದ್ದರು. 
ರಾಯಚೂರು

ಮನೆಗಳ್ಳತನ ಆರೋಪಿಯಿಂದ ಚಿನ್ನಾಭರಣ ಜಪ್ತಿ

ರಾಯಚೂರು ನಗರದ ಪ್ರಶಾಂತ ಕಾಲೋನಿಯಲ್ಲಿ ಮನೆಗಳ್ಳತನ ಮಾಡಿದ ರೋಪಿಯನ್ನು ಪಶ್ಚಿಮ ಠಾಣೆಯ ಪೊಲೀಸರು ಬಂಧನ ಮಾಡಿ ಆರೋಪಿಯಿಂದ ಒಟ್ಟು 7.20 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
2025ರ ಏಪ್ರಿಲ್ 7ರಂದು ಮಧ್ಯರಾತ್ರಿ ನಗರದ ಪ್ರಶಾಂತ ಕಾಲೋನಿಯ ನಿವಾಸಿ ಎ.ಕೆ. ವಿರೇಶ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಪಿಐ ಉಮೇಶ ಕಾಂಬ್ಳೆ ಹಾಗೂ ಪಿಎಸ್‌ಐ ಮಂಜುನಾಥ ಟಿ.ಡಿ. ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಆಂಧ್ರ ಪ್ರದೇಶದ ಗೋವಿಂದರಾಜುಲು ದೊಮ್ಮರ ಬಂಧಿಸಿ,
ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿದ 4.50 ಲಕ್ಷ ಮೌಲ್ಯದ 25 ಗ್ರಾಂ ತೂಕದ ಬಂಗಾರದ ನೆಕ್‌ಲೆಸ್ ಹಾಗೂ ನೇತಾಜಿನಗರ ಪೊಲೀಸ್ ಠಾಣೆಯ ಅಪರಾಧಕ್ಕೆ ಸಂಬಂಧಿಸಿದ 2.70 ಲಕ್ಷ ಮೌಲ್ಯದ 15 ಗ್ರಾಂ ತೂಕದ ಬಂಗಾರದ ಸರ ಸೇರಿ ಒಟ್ಟು 7.20 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಂಜುನಾಥ ಟಿ.ಡಿ., ಲಕ್ಷ್ಮೀದೇವಿ, ಎಎಸ್‌ಐ ಶ್ರೀನಿವಾಸ, ಪೇದೆಗಳಾದ ರವಿರಾಜ, ವಿನಾಯಕ, ರಮೇಶ, ಚಂದ್ರಶೇಖರ, ಹನುಮೇಶ ಮತ್ತು ಮಂಜುನಾಥ ಇದ್ದರು.