ರಾಯಚೂರಿನ ರಂಜಿತಾ ಪ್ಯಾಲೇಸ್ ಹೊಟೇಲ್‌ನಲ್ಲಿ ’ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ’ವಿಶೇಷ ಆಭರಣ ಪ್ರದರ್ಶನವನ್ನು ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಿ. ವಿಜಯರಾಜೇಶ್ವರಿ ಅವರು ಶುಕ್ರವಾರ ಚಾಲನೆ ನೀಡಿದರು. ಮುಖ್ಯಸ್ಥ ಸಂತೋಷ್. ಆರ್., ಅರ್ಚನಾ ಸುಂಕಾರಿ ಇದ್ದರು.
ಅನೇಕ ವರ್ಷಗಳ ಇತಿಹಾಸ ಹೊಂದಿರುವ ’ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ’ ನಗರದ ರಂಜಿತಾ ಪ್ಯಾಲೇಸ್ ಹೊಟೇಲ್‌ನಲ್ಲಿ ವಿಶೇಷ ಆಭರಣ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಜಿ. ವಿಜಯರಾಜೇಶ್ವರಿ ಉದ್ಘಾಟಿಸಿ ಮಾತನಾಡಿದರು,ಇತಿಹಾಸವಿರುವ ಬ್ರ್ಯಾಂಡ್ ಚಿನ್ನಾಭರಣ ಪ್ರದರ್ಶನವು ಆ.14 ರಿಂದ 17 ರವರೆಗೆ ನಡೆಯುತ್ತಿರುವುದು ಖುಷಿ ತಂದಿದೆ. ತನ್ನ ಕಲಾತ್ಮಕತೆಯನ್ನು ತಂದಿರುವುದು ಸಂತೋಷದ ವಿಷಯ. ಇಲ್ಲಿನ ಪ್ರತಿಯೊಂದು ವಿನ್ಯಾಸವು ಕಥೆ, ಸಂಪ್ರದಾಯ ಮತ್ತು ಭಾವನೆಗಳಿಗೆ ಜೀವ ತುಂಬಿದೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಪ್ರದರ್ಶನದಲ್ಲಿ ಶುದ್ಧ ಚಿನ್ನ, ಅಪರೂಪದ ರತ್ನಗಳು, ಮುತ್ತುಗಳು, ಪಚ್ಚೆ, ಮಾಣಿಕ್ಯ ಹಾಗೂ ಅದ್ಭುತ ವಜ್ರಾಭರಣಗಳ ಬೃಹತ್ ಸಂಗ್ರಹವಿದೆ. ಜೊತೆಗೆ ನೈತಿಕ ಹಾಗೂ ಸುಸ್ಥಿರ ಐಷಾರಾಮಿತನದ ಸಂಕೇತವಾಗಿ ’ಲ್ಯಾಬ್-ಗ್ರೋನ್’ ವಜ್ರಗಳ ಕ್ರಾಂತಿಕಾರಿ ಸಂಗ್ರಹವಾದ ವಿಶೇಷವಾಗಿ ಪರಿಚಯಿಸಲಾಗಿದೆ.
ಮಳಿಗೆ ಮುಖ್ಯಸ್ಥ ಸಂತೋಷ್. ಆರ್. ಮಾತನಾಡಿ, ರಾಯಚೂರಿನ ಜನರ ಪ್ರೀತಿ ಮತ್ತು ಅಗಾಧ ಪ್ರತಿಕ್ರಿಯೆ ನಮಗೆ ಮತ್ತೆ ಮರಳಿ ಬರಲು ಸ್ಫೂರ್ತಿ ನೀಡಿದೆ. ನಮ್ಮ ಪರಂಪರೆಯನ್ನು ಇಲ್ಲಿನ ಗ್ರಾಹಕರೊಂದಿಗೆ ಹಂಚಿಕೊಳ್ಳಲು ಸಂತಸವೆನಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಅರ್ಚನಾ ಸುಂಕಾರಿ ಇದ್ದರು.