ಮಸ್ಕಿಯಲ್ಲಿ ಉಪನ್ಯಾಸಕ ಮಹಾಂತೇಶ ಮಸ್ಕಿ ಅವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯವನ್ನು ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಉದ್ಘಾಟಿಸಿದರು. ಪ್ರಮುಖರಾದ ಮಹಾಂತಗೌಡ ಪಾಟೀಲ್, ಶಶಿಕಾಂತ ಕಾಡ್ಲೂರು, ವಿದ್ಯಾವತಿ ವನಕಿ, ಗಿರಿಜಮ್ಮ ಸಾಲಿಮಠ ಇದ್ದರು. 
ರಾಯಚೂರು

ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿ

ಮಸ್ಕಿ: ದೇಹಕ್ಕೆ ಆತ್ಮ ಹೇಗೆ ಮುಖ್ಯವೋ ಹಾಗೆಯೇ ಮನೆಗೆ ಗ್ರಂಥಾಲಯವಾಗಬೇಕು. ಇದರಿಂದ ಮನೆಯ ಸೌಂದರ್ಯವೂ ಹೆಚ್ಚುತ್ತದೆ. ರಾಜ್ಯದಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು. 
ಪಟ್ಟಣದಲ್ಲಿ ಉಪನ್ಯಾಸಕ ಮಹಾಂತೇಶ ಮಸ್ಕಿ ಅವರ ಮನೆಯಲ್ಲಿ ಬುಧವಾರ ಮನೆಗೊಂದು ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು. ಮನೆಗೊಂದು ಗ್ರಂಥಾಲಯದಲ್ಲಿ ಕನಿಷ್ಠ 500 ಪುಸ್ತಕಗಳನ್ನು ಸಂಗ್ರಹಿಸಬೇಕು. ಇದರಿಂದ ಒಂದು ಲಕ್ಷ ಮನೆಯಲ್ಲಿ 5 ಕೋಟಿ ಪುಸ್ತಕ ಸಂಗ್ರಹವಾಗಲಿದೆ. ಇದರಿಂದ ಲೇಖಕರು, ಪ್ರಕಾಶಕರು, ಓದುಗರ ಮಧ್ಯೆ ವ್ಯವಹಾರ ನಡೆದು ಅನೇಕರಿಗೆ ಉದ್ಯೋಗ ಒದಗಿಸಲು ಸಾಧ್ಯವಾಗುತ್ತದೆ ಎಂದರು. 
ಜಿಲ್ಲಾ ಸಂಚಾಲಕ ಗುಂಡುರಾವ್ ದೇಸಾಯಿ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಯೋಜನೆ ಬಗ್ಗೆ ತಿಳಿವಳಿಕೆ ನೀಡಿ ಹೆಚ್ಚು ಗ್ರಂಥಾಲಯ ಸ್ಥಾಪನೆಗೆ ಪ್ರಯತ್ನಿಸುವುದಾಗಿ ತಿಳಿಸಿದರು. 
ಮಹಾಂತೇಶ ಮಸ್ಕಿ, ಸರ್ಕಾರಿ ಪದವಿ ಕಾಲೇಜಿನ ಪ್ರಚಾರ್ಯ ಮಹಾಂತಗೌಡ ಪಾಟೀಲ್, ಲೇಖಕರಾದ ಸಿ.ದಾನಪ್ಪ, ಶಶಿಕಾಂತ ಕಾಡ್ಲೂರು, ಆದಪ್ಪ ಹೆಂಬಾ, ಸೂಗೂರೇಶ ಹಿರೇಮಠ, ಕಸಾಪ ತಾಲೂಕು ಅಧ್ಯಕ್ಷೆ ವಿದ್ಯಾವತಿ ವನಕಿ, ಗಿರಿಜಮ್ಮ ಸಾಲಿಮಠ, ಮಲ್ಲಿಕಾರ್ಜುನ, ದೊಡ್ಡಪ್ಪ ಮುರಾರಿ, ಘನಮಠದಯ್ಯ ಸಾಲಿಮಠ, ಪರಶುರಾಮ ಕೊಡಗುಂಟಿ, ದಯಾನಂದ ಜೋಗಿನ್ ಇತರರಿದ್ದರು.