ಮಸ್ಕಿಯ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಮಹಾಂತಗೌಡ ಪಾಟೀಲ್, ಕಾಲೇಜಿನ ಸಂಯೋಜಕರಾದ ರೋಹಿಣಿಮೂರ್ತಿ, ರಾಮಣ್ಣ ಜುಮ್ಮ, ಬಸವರಾಜ, ಶಿವಗ್ಯಾನಪ್ಪ, ಹಾಜಿಬಾಬ, ಪರಮಾನಂದ ಹಂಗರಗಿ ಇದ್ದರು. 
ರಾಯಚೂರು

ಮಸ್ಕಿ ಜನವಸತಿಗೆ ಜಾಗತಿಕ ಮಹತ್ವ

ಪ್ರಮುಖ ಮುಖ್ಯಾಂಶಗಳು

  • ವಾಲ್ಮೀಕಿ ವಿವಿ ಕುಲಪತಿ ಶಿವಾನಂದ ಕೆಳಗಿನಮನಿ ಅಭಿಪ್ರಾಯ
  • ಮಸ್ಕಿ ಇತಿಹಾಸ ಸಂಸ್ಕೃತಿ ವಿಚಾರ ಸಂಕಿರಣ
ಮಸ್ಕಿ: ಇತಿಹಾಸವನ್ನು ವಿವಿಧ ಆಯಾಮಗಳಿಂದ ಗುರುತಿಸಿ ಅಧ್ಯಯನ ಮಾಡಬೇಕು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಹೇಳಿದರು.
ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಮಸ್ಕಿ ಪರಿಸರ, ಪುರಾತತ್ವ, ಇತಿಹಾಸ ಮತ್ತು ಸಂಸ್ಕೃತಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಸ್ಕಿಯಲ್ಲಿ ಐತಿಹಾಸಿಕ ಆಕರ, ನಾಗರಿಕತೆ, ಸಾಂಸ್ಕೃತಿಕ ಕುರುಹುಗಳು, ಬೌದ್ಧ, ಜೈನ, ವೈಷ್ಣವ, ವೀರಶೈವ, ಸಿದ್ಧ, ನಾಥ, ಯೋಗಿ, ಜೋಗಿ, ತಾಣಗಳು ಇಲ್ಲಿವೆ. ಇಲ್ಲಿನ ಜನವಸತಿ ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದಿದೆ ಎಂದರು. ವಿವಿಧ ವಿಷಯಗಳ ಕುರಿತು ವಿದ್ವಾಂಸರು ಪ್ರಬಂಧ ಮಂಡಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.