ಸಿಂಧನೂರಿನಲ್ಲಿ ಭಗತ್‌ಸಿಂಗ್ ಆಟೋ ಚಾಲಕರ ಸಂಘ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ಗೌರವಾಧ್ಯಕ್ಷ ನಾಗರಾಜ ಪೂಜಾರ್, ಅಧ್ಯಕ್ಷ ಬಸವರಾಜ ಕೊಂಡೆ, ಉಪಾಧ್ಯಕ್ಷ ನಾಗಪ್ಪ ಬಿಂಗಿ, ಕಾರ್ಯದರ್ಶಿ ಶೇಕ್ಷಾವಲಿ ಇತರರಿದ್ದರು. 
ರಾಯಚೂರು

ಆಟೋ ನಿಲ್ದಾಣಕ್ಕೆ ಅವಕಾಶ ನೀಡಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • auto stand

ಆಟೋ ನಿಲ್ದಾಣಕ್ಕೆ ಅವಕಾಶ ನೀಡಿ

ಸಿಂಧನೂರಿನಲ್ಲಿ ನಗರಸಭೆ ಪೌರಾಯುಕ್ತಗೆ ಚಾಲಕರ ಸಂಘ ಮನವಿ

ಸಿಂಧನೂರು: ನಗರದ ವಿವಿಧೆಡೆ ಆಟೋ ನಿಲ್ದಾಣ ನಿರ್ಮಿಸಲು ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ಭಗತ್‌ಸಿಂಗ್ ಆಟೋ ಚಾಲಕರ ಸಂಘದ ತಾಲೂಕು ಸಮಿತಿ ಗುರುವಾರ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿಗೆ ಮನವಿ ಸಲ್ಲಿಸಿತು.
ರಾಯಚೂರು ಜಿಲ್ಲೆಯಲ್ಲೇ ಪ್ರಮುಖ ವಾಣಿಜ್ಯ ನಗರ ಸಿಂಧನೂರು. ನಿತ್ಯ ನಗರಕ್ಕೆ ಬಂದು ಹೋಗುವವರ ಸಂಖ್ಯೆ ಹಾಗೂ ಸ್ಥಳೀಯ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತ್ತಿದೆ. ಜನಸಾಮಾನ್ಯರಿಗೆ ಸ್ಥಳೀಯವಾಗಿ ಸಾರಿಗೆ ಸೇವೆ ಒದಗಿಸುವಲ್ಲಿ ಸ್ಥಳೀಯ ಆಟೋ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುತ್ತಿರುವ ಜನದಟ್ಟಣೆಯಿಂದ ನಗರದ ಹಲವೆಡೆ ಆಟೋ ನಿಲ್ದಾಣ ಇಲ್ಲದೆ ಸಮಸ್ಯೆ ಎದುರಾಗಿದೆ. ಆದ್ದರಿಂದ ನಗರದ ಕುಷ್ಟಗಿ ಮಾರ್ಗದ ಬಸ್ ವೃತ್ತ, ಬಸ್ ನಿಲ್ದಾಣ ಬಳಿ ಸಹನಾ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಹಾಗೂ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ನಗರಸಭೆ ಜಾಗದಲ್ಲಿ ಆಟೋ ಸ್ಟಾೃಂಡ್‌ಗೆ ಅವಕಾಶ ಒದಗಿಸಿ, ಗ್ರಿಲ್, ನಾಮಫಲಕ ಅಳವಡಿಸಬೇಕೆಂದು ಆಗ್ರಹಿಸಿದರು.
ಶೌಚಗೃಹ ನಿರ್ಮಿಸಿ: ದೇವರಾಜು ಅರಸು ಮಾರುಕಟ್ಟೆ , ಸುಕಾಲಪೇಟೆ ರಸ್ತೆ ಸೇರಿ ಜನಸಂದಣಿ ಪ್ರದೇಶದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು. ಪಶು ಆಸ್ಪತ್ರೆ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಚರಂಡಿಯು ಹೂಳಿನಿಂದ ಮುಚ್ಚಿದ್ದು, ವಿಲೇವಾರಿ ಮಾಡಿ, ದುರಸ್ತಿಗೊಳಿಸಿ ಈ ಪ್ರದೇಶದಲ್ಲಿ ಸಾರ್ವಜನಿಕ ಶೌಚಗೃಹ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ತಾಲೂಕು ಗೌರವಾಧ್ಯಕ್ಷ ನಾಗರಾಜ ಪೂಜಾರ್, ಅಧ್ಯಕ್ಷ ಬಸವರಾಜ ಕೊಂಡೆ, ಉಪಾಧ್ಯಕ್ಷ ನಾಗಪ್ಪ ಬಿಂಗಿ, ಕಾರ್ಯದರ್ಶಿ ಶೇಕ್ಷಾವಲಿ, ಖಜಾಂಚಿ ಖಾಜಾಹುಸೇನ್ ಇತರರಿದ್ದರು.