ಅರಕೇರಾ ತಹಸೀಲ್ದಾರ್ ಅಮರೇಶ ಬಿರಾದರ್‌ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿತು. ಸಮಿತಿ ರಾಜ್ಯ ಸಂಚಾಲಕ ಹನುಮಂತಪ್ಪ ಕಾಕರಗಲ್, ತಾಲೂಕು ಸಂಚಾಲಕ ಶಿವಪ್ಪ ಪಲಕನಮರಡಿ, ಪ್ರಮುಖರಾದ ಶಿವರಾಜ ಕೋರಿ, ನಾಗರಾಜ ದೇವರಮನಿ, ರವಿಕುಮಾರ್ ಚನ್ನಮ್ಮ ಶಿವಪ್ಪ ಕ್ಯಾದಿಗ್ಗೇರಾ, ಸಲೀಂಸಾಬ್, ಆಂಜನೇಯ ಬೇರಿ ಇತರರಿದ್ದರು.
ಅರಕೇರಾ, ರೈತರಿಗೆ ಪಟ್ಟಾ ನೀಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ,
Karnataka Dalit Sangharsh Samiti appeals to give land titles to Arakera farmers
ಅರಕೇರಾ: ಸಾಗುವಳಿ ರೈತರಿಗೆ ಪಟ್ಟಾ ನೀಡಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪಟ್ಟಣದ ತಹಸೀಲ್ದಾರ್ ಅಮರೇಶ ಬಿರಾದರ್‌ಗೆ ಬುಧವಾರ ಮನವಿ ಸಲ್ಲಿಸಿತು.
ಬಗರ್ ಹುಕುಂ ಸಾಗುವಳಿದಾರರು ಸಕ್ರಮಕ್ಕಾಗಿ ಹಾಕಿದ ನಮೂನೆ-57 ತಿರಸ್ಕೃತ ಅರ್ಜಿಗಳನ್ನು ಮರು ಪರಿಶೀಲಿಸಿ ಭೂರಹಿತ ಬಡವರಿಗೆ ಭೂಮಿ ಮಂಜೂರು ಮಾಡಬೇಕು. ಅರ್ಜಿ ಸಲ್ಲಿಸಿದ ಭೂ ರಹಿತರಿಗೆ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ. ಕಷ್ಟ ಪಟ್ಟು ಭೂಮಿ ಹಸನು ಮಾಡಿ ಸಾಗುವಳಿ ಮಾಡಿದ ರೈತರ, ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕಾರ ಮಾಡಿ ಭೂಮಿ ಕಸಿದುಕೊಳ್ಳಲು ಹುನ್ನಾರ ನಡೆಸಲಾಗುತ್ತಿದೆ.
ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಡಿ.23 ರಂದು ದೇವದುರ್ಗದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹನುಮಂತಪ್ಪ ಕಾಕರಗಲ್ ತಿಳಿಸಿದರು. ಸುವರ್ಣ ಗ್ರಾಮೋದಯ ಗ್ರಾಮಗಳಾದ ಕ್ಯಾದಿಗ್ಗೇರಾ, ಶಾವಂತಗೇರಾ, ಲಿಂಗದಹಳ್ಳಿ ಗ್ರಾಮಗಳಲ್ಲಿ ಗುರುತಿಸಿದ ಭೂಮಿಯಲ್ಲಿ ವಸತಿ ಬಡಾವಣೆ ರಚಿಸಿ, ಫಲಾನುಭವಿಗಳಿಗೆ ಕೂಡಲೇ ನಿವೇಶನ ಹಂಚಿಕೆ ಮಾಡಬೇಕು. ನಿವೇಶನ ಹಂಚಿಕೆ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ನಡೆ ಸರಿಯಲ್ಲ. ನಿವೇಶನ ಲಭ್ಯವಿರುವ ಗ್ರಾಮಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಲು ಆಗ್ರಹಿಸಿದರು.