ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಮಹಿಳಾ ಘಟಕದ ಜಿಲ್ಲಾ ಉಪಾಧಕ್ಷೆ ಪಿ.ಸುರೇಖಾ 
ರಾಯಚೂರು

ಹಿಂದುಳಿದ ವರ್ಗದವರಿಗೆ ಲ್ಯಾಪ್‌ಟಾಪ್ ನೀಡಲಿ

ರಾಚಯ್ಯ ಸ್ವಾಮಿ
ರಾಯಚೂರು ಇಚೇಗೆ ಸಿಎಂ ಸಿದ್ಧರಾಮಯ್ಯರವರು ಬಜೆಟ್ನ್ನು ಮಂಡಿಸಿದ್ದು ಅದರಲ್ಲಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಲ್ಯಾಪ್‌ಟಾಪ್ ಯೋಜನೆಯನ್ನು ಅಲ್ಪ ಸಂಖ್ಯಾತರ ಜತೆಗೆ ಹಿಂದುಳಿದ ಸಮುದಾಯದ ವಿದ್ಯಾರ್ಥಿನಿಯರಿಗೆ ವಿಸ್ತರಿಸಬೇಕೆಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಮಹಿಳಾ ಘಟಕದ ಜಿಲ್ಲಾ ಉಪಾಧಕ್ಷೆ ಪಿ.ಸುರೇಖಾ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಮಾತನಾಡಿ, ಹಿಂದುಳಿದ ವರ್ಗದಲ್ಲಿ ಬರುವ ಪ್ರವರ್ಗ-1 ಹಾಗೂ 2(ಎ) ಒಳಪಡುವ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ಜಾತಿಗಳಿಗೆ ಸೇರಿದ ವಿದ್ಯಾವಂತ ಮಹಿಳೆಯರಿಗೂ ಲ್ಯಾಪ್‌ಟಾಪ್ ವಿತರಿಸುವ ಯೋಜನೆಯನ್ನು ಜಾರಿಗೆ ತರಬೇಕು. ಹಿಂದುಳಿದ ಹಾಗೂ ಅತೀ ಹಿಂದುಳಿದ ವರ್ಗಗಳ ಮತಗಳು ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದರಿಂದ, 2026-27ರ ಬಜೆಟ್‌ನಲ್ಲಿ ಈ ವರ್ಗಗಳಿಗೆ ಸಂಬಂಧಿಸಿದಂತೆ ಯಾವುದೇ ವಿಶೇಷ ಯೋಜನೆಗಳನ್ನು ಘೋಷಿಸದಿರುವುದು ಬೇಸರದ ಸಂಗತಿಯಾಗಿದೆ. ಅಲ್ಲದೇ ಜಿಲ್ಲೆಯ ಬಾಲಕಿಯರ ಶಿಕ್ಷಣದ ಅಭಿವೃದ್ಧಿಗೆ ಸಂಬಂಧಿಸಿದಂತೆ 2 ಮೆಟ್ರಿಕ್ ಪೂರ್ವ ಹಾಗೂ 2 ಮೆಟ್ರಿಕ್ ನಂತರ ಸೇರಿ ಒಟ್ಟು 4 ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು.
ಆದರೆ ಜಿಲ್ಲೆಗೆ ಯಾವುದೇ ಹೊಸ ವಿದ್ಯಾರ್ಥಿನಿಲಯ ಮಂಜೂರು ಆಗದಿರುವುದು ವಿಷಾದನೀಯವಾಗಿದೆ. ಆದ್ದರಿಂದ, ಮುಂದಿನ ಪೂರಕ ಆಯ-ವ್ಯಯದಲ್ಲಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ಜಾತಿಗಳಿಗೆ ಸೇರಿದ ಮಹಿಳೆಯರಿಗೂ ಲ್ಯಾಪ್‌ಟಾಪ್ ವಿತರಣೆ ಯೋಜನೆಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ , ಈರಮ್ಮ ವಕೀಲರು , ನಂದಿನಿ ವೀರೇಶ್ , ಬಿ.ಉಮಾ , ಇಂದಿರಾ ರಾಘಮ್ಮ , ಕವಿತಾ ವೀರೇಶ್ , ಉಮಾಶ್ರೀ , ಅಂಜಲಿ ಇದ್ದರು.