ಮಾನ್ವಿ ಬಸವ ವೃತ್ತದಲ್ಲಿ ಗುರುವಾರ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ಪ್ರಚಾರಾಂದೋಲನ ಅಂಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿತು. ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪ್ರಜಾರ್, ಜಿಲ್ಲಾ ಅಧ್ಯಕ್ಷ ಅಜೀಜ್ ಜಾಗೀದಾರ್ ಇದ್ದರು.
ಮಾನ್ವಿ: ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳು ಹಾಗೂ ಜನರ ಉದ್ಯೋಗ ಕಸಿಯುವ ವಿಬಿ ಜಿ ರಾಮ್ ಜಿ ಕಾಯ್ದೆ ಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕೂಡಲೇ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್ ಆಗ್ರಹಿಸಿದರು.
ಪಟ್ಟಣದ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ವತಿಯಿಂದ ಗುರುವಾರ ಪ್ರಚಾರಾಂದಲೋನ ಅಂಗವಾಗಿ ಅಂಬೇಡ್ಕರ್ ವೃತ್ತದಿಂದ ಬಸವ ವೃತ್ತದವರೆಗೆ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ರೈತ-ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ, ಜೆಸಿಟಿಯು ಫೆೆ.12 ರಂದು ರಾಷ್ಟ್ರವ್ಯಾಪಿ ಮುಷ್ಕರ ಕರೆ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಬಿಲ್‌ಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಿಂದ ಸಿಗಬೇಕಾದ ಎಲ್ಲ ಹಕ್ಕುಗಳನ್ನು ಕಸಿದು ಕಾರ್ಮಿಕರನ್ನು, ಕಾರ್ಮಿಕ ಕುಟುಂಬಗಳನ್ನು ಬೀದಿ ಪಾಲು ಮಾಡಿದೆ. ಈ ನಾಲ್ಕು ಕೋಡ್‌ಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ಅಜೀಜ್ ಜಾಗೀದಾರ್, ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಸಿರವಾರ ವಿಭಾಗದ ಅಧ್ಯಕ್ಷ ರಾಜಮಹ್ಮದ್, ಮಾನ್ವಿ ಉಪ ವಿಭಾಗದ ಅಧ್ಯಕ್ಷ ಬಸಲಿಂಗಪ್ಪ ಜಂಬಲದಿನ್ನಿ, ಹಿರೇಕೊಟ್ನೆಕಲ್ ಉಪ ವಿಭಾಗದ ಅಧ್ಯಕ್ಷ ವೆಂಕಟೇಶ್ ಕೋರಿ, ಕೇಂದ್ರ ಸಮಿತಿ ಖಜಾಂಚಿ ಜಲೀಲ್ ಪಾಷಾ, ಪ್ರಮುಖರಾದ ಗೋಪಾಲರಾವ್, ಚಂದ್ರಶೇಖರ್, ಬಸವರಾಜ ಬಾಗಲವಾಡ, ರಂಗಪ್ಪ ನಾಯಕ, ಶಂಕರ್ ಜಾನೇಕಲ್, ಕೃಷ್ಣ, ಇಮ್ರಾನ್ ಇನ್ನಿತರರಿದ್ದರು.